ರಾತ್ರೋರಾತ್ರಿ ಸೆಂಟ್ರಲ್ ಜೈಲಿನಿಂದ ಐವರು ಕೈದಿಗಳು ಪರಾರಿ

ಭಾರೀ ಭದ್ರತೆ ಇರುವ ನಾಗ್ಪುರ ಸೆಂಟ್ರಲ್ ಜೈಲಿನಿಂದ ಐವರು ಕೈದಿಗಳು ಮಂಗಳವಾರ ತಪ್ಪಸಿಕೊಂಡು ಪರಾರಿಯಾಗಿದ್ದಾರೆ.
ಐವರು ಕೈದಿಗಳು ಪರಾರಿ
ಐವರು ಕೈದಿಗಳು ಪರಾರಿ

ನಾಗ್ಪುರ: ಭಾರೀ ಭದ್ರತೆ ಇರುವ ನಾಗ್ಪುರ ಸೆಂಟ್ರಲ್ ಜೈಲಿನಿಂದ ಐವರು ಕೈದಿಗಳು ಮಂಗಳವಾರ ತಪ್ಪಸಿಕೊಂಡು ಪರಾರಿಯಾಗಿದ್ದಾರೆ.

ಮೊಕಾ ಕಾಯ್ದೆಯ ಮೂವರು ಆರೋಪಿಗಳು ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಕೈದಿಗಳು ಇಂದು ಬೆಳಗಿನ ಜಾವ 2 ರಿಂದ 4 ಗಂಟೆ ಸಮಯದಲ್ಲಿ ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೊಕಾ ಕಾಯ್ದೆ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ)ಯಡಿ ಕೈದಿಗಳಾಗಿದ್ದವರನ್ನು ಬಿಸೇನ್ ಸಿಂಗ್, ಮೊಹಮ್ಮದ್ ಸಲೇಬ್ ಸಲೀಂ ಮತ್ತು ಸತ್ಯೇಂದ್ರ ಗುಪ್ತ ಎಂದು ಗುರುತಿಸಲಾಗಿದೆ.

ಉಳಿದಂತೆ ನೇಪಾಳ ಮೂಲದ ಪ್ರೇಮ್ ಸೆಕ್ಷನ್425(ಶಸ್ತ್ರಾಸ್ತ್ರ ಕಾಯ್ದೆ) ಹಾಗೂ ಸೆಕ್ಷನ್ 392(ಕಳ್ಳತನ) ಅಡಿಯಲ್ಲಿ ಆಕಾಶ್ ಗೋಲು ಸೆಂಟ್ರಲ್ ಜೈಲಿನಲ್ಲಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕೈದಿಗಳ ಪತ್ತೆಯಾಗಿ ಜಾಲ ಬೀಸಿದ್ದಾರೆ. ಹೆಚ್ಚು ಜನ ದಟ್ಟನೆಯಿರುವ ರೈಲ್ವೇ ನಿಲ್ದಾಣ, ಪ್ರಮುಖ ಬಸ್ ನಿಲ್ದಾಣ ಮತ್ತು ಖಾಸಗಿ ಬಸ್ ಡಿಪೋಗಳಲ್ಲಿ ಶೋಧ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com