

ಲಂಡನ್: ಇಂಗ್ಲೆಂಡ್‍ನಲ್ಲಿ ಮಹಾಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆ ಹಾಲಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಅಲ್ಪಮತ ಅಂತರದಲ್ಲಿ ಗೆಲುವು ಸಾಧಿಸಬಹುದು ಎಂಬ ಭವಿಷ್ಯ ನುಡಿದಿದೆ.
ಇದರಿಂದ ಕೊಂಚ ವಿಚಲಿತವಾಗಿರುವ ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿ ಕೊನೆ ಗಳಿಗೆಯ ಪ್ರಚಾರವನ್ನು ಚುರುಕುಗೊಳಿಸಿದೆ.
ಕಣದಲ್ಲಿ ಭಾರತೀಯ ಅಭ್ಯರ್ಥಿಗಳು:
ಕಳೆದ ಚುನಾವಣೆಯಲ್ಲಿ ಭಾರತೀಯ ಮೂಲದ 8 ಅಭ್ಯರ್ಥಿಗಳು ಚುನಾವಣೆ ಗೆದ್ದು ದಾಖಲೆ ಬರೆದಿದ್ದರು. ಹಾಲಿ ಸದಸ್ಯರಾಗಿರುವ ಲೇಬರ್ ಪಾರ್ಟಿಯ ಕೀತ್ ವಾಜ್,
ಅವರ ಸೋದರಿ ವಲೇರಿ ವಾಜ್ ಈ ಬಾರಿಯೂ ಕಣದಲ್ಲಿದ್ದಾರೆ. ವಿರೇಂದರ್ ಶರ್ಮ, ಸೀಮಾ ಮಲ್ಹೋತ್ರ ಹಾಗೂ ಹೆಸ್ಟನ್ ಲೇಬರ್ ಪಾರ್ಟಿಯಿಂದ ಕಣಕ್ಕಿಳಿದಿರುವ ಭಾರತೀಯ ಮೂಲದ ಇತರರು. ಮಿಕ್ಕಂತೆ ಪ್ರೀತಿ ಪಟೇಸ್, ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಕೂಡ ಮೊದಲ ಬಾರಿಗೆ ಇಂಗ್ಲೆಂಡ್ ಸಂಸತ್ ಪ್ರವೇಶಿಸುವ ಕನಸಿನಲ್ಲಿದ್ದಾರೆ.
ಭಾರತೀಯ ಮತಗಳೇ ನಿರ್ಣಾಯಕ?: ಟಿವಿ, ಪತ್ರಿಕೆ ಹಾಗೂ ಇತರೆ ಸಮೀಕ್ಷೆಗಳು ಈ ಬಾರಿಯ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿರುವುದನ್ನೇ ಸೂಚಿಸಿದೆ. ಭಾರತೀಯ ಮೂಲದವರ ಮತಗಳೇ ಈ ಬಾರಿ ಅಧಿಕಾರ ಹಿಡಿಯುವ ಪಕ್ಷವನ್ನು ನಿರ್ಧರಿಸಲಿವೆ ಎಂಬುದನ್ನು ಸಮೀಕ್ಷೆಗಳು ಒತ್ತಿ ಹೇಳುತ್ತಿವೆ.
ಕಾಮನ್‍ವೆಲ್ತ್ ಮೂಲಕ ಪೌರತ್ವ ಪಡೆದ 6.5 ಲಕ್ಷ ವಲಸಿಗ ಭಾರತೀಯರು ಹಾಗೂ ಈಗಾಗಲೇ ಶಾಶ್ವತ ಪೌರತ್ವ ಹೊಂದಿರುವ 11.5 ಮಿಲಿಯನ್ ಭಾರತೀಯರ ಮತಗಳು ಈ ಚುನಾವಣೆಯಲ್ಲಿ ನಿರ್ಣಾಯಕ ಎಂಬ ಸತ್ಯವನ್ನು ಸರ್ವಪಕ್ಷಗಳೂ ಕಂಡುಕೊಂಡಿವೆ