

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಾರ್ಕೆಟ್‍ವೊಂದರಲ್ಲಿ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿಗೆ ಇಬ್ಬರು ಅಪ್ರಾಪ್ತೆಯರು ಸೇರಿ ಒಟ್ಟು 14 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಗ್ರೆನೇಡ್ ಗುರಿ ತಪ್ಪಿ ಜನ ದಟ್ಟಣೆಯಿದ್ದ ಸ್ಥಳದಲ್ಲಿ ಸಿಡಿದು ಈ ಅನಾಹುತ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆ ಬಳಿಯ ಗಡಿ ಪ್ರದೇಶದಲ್ಲಿ ಭದ್ರತಾ ಪಡೆ, ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿದ್ದು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಉಗ್ರರ ಅಡಗುತಾಣದ ಬಗ್ಗೆ ಸ್ಪಷ್ಟ ಮಾಹಿತಿ ಪಡೆದ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಹಾಗೂ ಕಾಕೋರ ಅರಣ್ಯ ಪೊಲೀಸರು ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದರು.
ಅಡಗುತಾಣದಿಂದ ಒಂದು ಎಕೆ-47, 212 ಎಕೆ ರೌಂಡ್ಸ್, 8 ಎಕೆ ದ್ದುಗುಂಡುಗಳು, 223 ಪಿಕ ರೌಂಡ್ಸ್, ಒಂದು ಜಿಪಿಎಸ್, 3 ಬೈನಾಕ್ಯೂಲರ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.