ಉತ್ತರಕಾಶಿ: ಕಣಿವೆಗೆ ಉರುಳಿದ ಜೀಪ್, ಆರು ಮಂದಿ ಸಾವು

ಘನ್ಸಾಲಿಯಿಂದ ಚಮಾಲಿಯಾಗೆ ತೆರಳುತ್ತಿದ್ದ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದ ಪರಿಣಾಮ ಆರು ಪ್ರಯಾಣಿಕರು ಮೃತಪಟ್ಟಿದ್ದಾರೆ...
ಅಪಘಾತ(ಸಾಂದರ್ಭಿಕ ಚಿತ್ರ)
ಅಪಘಾತ(ಸಾಂದರ್ಭಿಕ ಚಿತ್ರ)
Updated on

ಉತ್ತರಕಾಶಿ: ಘನ್ಸಾಲಿಯಿಂದ ಚಮಾಲಿಯಾಗೆ ತೆರಳುತ್ತಿದ್ದ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದ ಪರಿಣಾಮ ಆರು ಪ್ರಯಾಣಿಕರು ಮೃತಪಟ್ಟಿದ್ದಾರೆ.

ಉತ್ತರಖಂಡ್ ನ ಉತ್ತರ ಕಾಶಿ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಜೀಪು ಕಣಿವೆಗೆ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ಮತ್ತೀಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಾಗೊಂಡಿದ್ದವರನ್ನು ದೂನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವೇಳೆ ಚಾಲಕ ಸಹ ಮೃತಪಟ್ಟಿದ್ದಾನೆ.

ದುರ್ಘಟನೆಗೆ ಸಂಬಂಧಿಸಿದಂತೆ ಉತ್ತರ್ ಖಂಡ್ ರಾಜ್ಯಪಾಲ ಅಜೀಜ್ ಖುರೇಶಿ ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com