

ವಾಷಿಂಗ್ಟನ್: ನೇಪಾಳ ಭೂಕಂಪ ಸಂತ್ರಸ್ತರಿಗಾಗಿ 8 ವರ್ಷದ ಬಾಲಕನೊಬ್ಬ ಬರೋಬ್ಬರಿ 17.4 ಲಕ್ಷ ರೂಪಾಯಿ ಸಂಗ್ರಹಿಸಿ ಮಾನವೀಯತೆಯನ್ನು ಮೆರೆದಿದ್ದಾನೆ.
ನೇಪಾಳ ಮೂಲದ ಅಮೇರಿಕನ್ ನಿವಾಸಿಯಾದ ಈ ಪುಟ್ಟ ಬಾಲಕನ ಹೆಸರು ನೀವ್ ಸರಾಫ್. ಪೋಷಕರು ನೇಪಾಳ ಮೂಲದವರಾಗಿದ್ದು, ತನ್ನ ದೇಶದಲ್ಲಿ ಪ್ರಕೃತಿ ವಿಕೋಪದಿಂದಾದ ಅನಾಹುತದ ಕುರಿತು ದೂರದರ್ಶನ ವೀಕ್ಷಿಸಿ, ಅಪ್ಪ ಅಮ್ಮ ಬಿಳಿ ಕೇಳಿ ತಿಳಿದುಕೊಂಡಿದ್ದಾನೆ.
ನಂತರ ಸಂತ್ರಸ್ತರಿಗೆ ತಾನು ಸಹಾಯ ಮಾಡುಬೇಕು ಎಂದು ಚಿಂತಿಸಿ, ತಂದೆ ತಾಯಿ ಬಳಿ ಪಾಕೆಟ್ ಮನಿ ಕೇಳಿದ್ದಾನೆ. ಆದರೆ ಅವರು ನೀಡಿದ್ದ ಹಣ ಸಾಲದಿದ್ದಾಗ, ಅಕ್ಕಪಕ್ಕದ ನಿವಾಸಿಗಳಲ್ಲಿ ಸಹಾಯ ಯಾಚಿಸಿದ್ದಾನೆ. ಹುಡುಗನ ಕಳಕಳಿಯನ್ನು ನೋಡಿದ ಪರಿಚಿತರೊಬ್ಬರು 'ಕ್ರೌಡ್ ಫಂಡಿಂಗ್' ಎಂಬ ವೈಬ್‌ಸೈಟ್ ರಚಿಸಿಕೊಟ್ಟು ಬಾಲಕನ ಕಾರ್ಯದಲ್ಲಿ ನೆರವಾಗಿದ್ದಾರೆ.
ಇದರ ಪರಿಣಾಮವಾಗಿ ಹಣದ ಹೊಳೆಹರಿದುಬಂದಿದ್ದು ಬಾಲಕನ ಬಳಿ ಈಗ 27,276 ಡಾಲರ್ ಅಂದರೆ ಸುಮಾರು 17.4 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಮಗನ ಈ ಮಾನವೀಯತೆ ಕುರಿತು ಸಂತಸ ವ್ಯಕ್ತಪಡಿಸಿರುವ ಪ್ರಕಾಶ್ ಸಂಗ್ರಹವಾಗಿರುವ ಹಣವನ್ನು ಕೂಡಲೇ ನೇಪಾಳಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.