ದುಬೈಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್‌ಗೆ ಸಲ್ಲು ಅರ್ಜಿ

2002ರ ಹಿಟ್ ಆಂಡ್ ರನ್ ಪ್ರಕರಣದ ದೋಷಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ದುಬೈಗೆ ತೆರಳಲು ಅನುಮತಿ ಕೋರಿ...
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: 2002ರ ಹಿಟ್ ಆಂಡ್ ರನ್ ಪ್ರಕರಣದ ದೋಷಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ದುಬೈಗೆ ತೆರಳಲು ಅನುಮತಿ ಕೋರಿ ಗುರುವಾರ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಮೇ 6ರಂದು ಸಲ್ಮಾನ್ ಖಾನ್ ದೋಷಿ ಎಂದು ಸೆಷನ್ಸ್ ಕೋರ್ಟ್ ತೀರ್ಪು ನೀಡಿತ್ತು. ಆದರೆ ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟು ನಟ ಸಲ್ಮಾನ್ ಖಾನ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

ಕೋರ್ಟ್ ಸಲ್ಮಾನ್ ಗೆ ವಿಧಿಸಿರೋ ಷರತ್ತುಗಳೇನು?
* ಖುದ್ದು ಕೋರ್ಟ್ ಗೆ ಹಾಜರಾಗಬೇಕು
* ಪಾಸ್ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು
* ವಿದೇಶಕ್ಕೆ ತೆರಳುವಾಗ ಅನುಮತಿ ಪಡೆಯಲು ಸೂಚನೆ
* 30 ಸಾವಿರ ರೂಪಾಯಿ ಬಾಂಡ್ ನೀಡಬೇಕು
* ಹೊಸದಾಗಿ ಶ್ಯೂರಿಟಿ ನೀಡಿ ಜಾಮೀನು ಪಡೆಯಬೇಕು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com