ಎರಡೇ ದಿನದಲ್ಲಿ 400 ಮಂದಿಯ ಹತ್ಯೆಗೈದ ಇಸಿಸ್

ಸಿರಿಯಾದ ಪಾರಂಪರಿಕ ಪಲ್ಮೇರಾ ನಗರವನ್ನು ಪ್ರವೇಶಿಸಿದ ಎರಡೇ ದಿನದಲ್ಲಿ ಇಸಿಸ್ ಉಗ್ರರು 400 ಮಂದಿಯನ್ನು ಹತ್ಯೆಗೈದಿದ್ದಾರೆ...
ಇಸಿಸ್
ಇಸಿಸ್
Updated on

ಡಮಾಸ್ಕಸ್: ಸಿರಿಯಾದ ಪಾರಂಪರಿಕ ಪಲ್ಮೇರಾ ನಗರವನ್ನು ಪ್ರವೇಶಿಸಿದ ಎರಡೇ ದಿನದಲ್ಲಿ ಇಸಿಸ್ ಉಗ್ರರು 400 ಮಂದಿಯನ್ನು ಹತ್ಯೆಗೈದಿದ್ದಾರೆ.

ಈ ಆಘಾತಕಾರಿ ಸುದ್ದಿಯನ್ನು ಸಿರಿಯಾದ ಟಿವಿ ಚಾನೆಲ್‍ಗಳು ಬಹಿರಂಗಪಡಿಸಿವೆ. ಉಗ್ರರು ಎರಡೇ ದಿನದಲ್ಲಿ 400ರಷ್ಟು ಮಂದಿಯನ್ನು ಕೊಂದಿದ್ದು, ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು. ಕೊಂದುಹಾಕಿದ ಬಳಿಕ ಅವರ ದೇಹಗಳನ್ನು ಕತ್ತರಿಸಿ ಹಾಕಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸರ್ಕಾರದೊಂದಿಗೆ ಕೈಜೋಡಿಸಿದ ಮತ್ತು ತಮ್ಮ ಆದೇಶ ಪಾಲಿಸದ ಆರೋಪದಲ್ಲಿ ಇಸಿಸ್ ಇವರನ್ನು ಹತ್ಯೆಗೈದಿದೆ. ಸ್ಥಳೀಯ ಆಸ್ಪತ್ರೆಯೊಂದರ ನರ್ಸಿಂಗ್ ವಿಭಾಗದ ಮುಖ್ಯಸ್ಥೆ, ಅವರ ಕುಟುಂಬ ಸದಸ್ಯರು ಸೇರಿದಂತೆ ಅನೇಕ ಸರ್ಕಾರಿ ಅಧಿಕಾರಿಗಳು ಇಸಿಸ್ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com