ಭಾರತದ ಸ್ಲಮ್ ಗಳಿಗೆ ಶೀಘ್ರವೇ ಸೋಲಾರ್ ಭಾಗ್ಯ

ಬಡವರ ಏಳಿಗೆಗೆ ಸರ್ಕಾರ ಎಷ್ಟೆಲ್ಲಾ ಕ್ರಮ ಕೈಗೊಂಡರು ನಮ್ಮ ದೇಶದ ಸ್ಲಂ ನಿವಾಸಿಗಳ ಬವಣೆ ಮಾತ್ರ ಇನ್ನೂ ತಪ್ಪಿಲ್ಲ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ಯಾನ್ ಬೆರಾ: ಬಡವರ ಏಳಿಗೆಗೆ ಸರ್ಕಾರ ಎಷ್ಟೆಲ್ಲಾ ಕ್ರಮ ಕೈಗೊಂಡರು  ನಮ್ಮ ದೇಶದ ಸ್ಲಂ ನಿವಾಸಿಗಳ ಬವಣೆ ಮಾತ್ರ ಇನ್ನೂ ತಪ್ಪಿಲ್ಲ.

ದೇಶದ ಬಹುತೇಕ ಭಾಗಗಳಲ್ಲಿನ ಕೊಳಚೆ ಪ್ರದೇಶಗಳಿಗೆ ಇನ್ನು ವಿದ್ಯುತ್ ಭಾಗ್ಯ ದೊರೆತಿಲ್ಲ. ರಾತ್ರಿ ಆಯ್ತು ಅಂದ್ರೆ ಸೀಮೆ ಎಣ್ಣೆ ಬುಡ್ಡಿ ಬಳಸುವ ಪದ್ದತಿ ಇನ್ನೂ ಇದೆ. ಹೀಗಾಗಿ ಆಸ್ಟ್ರೇಲಿಯಾದ ಪೊಲ್ಲಿನೇಟ್ ಎಂಬ ಸೋಲಾರ್ ಕಂಪನಿ ಭಾರತದ ಕೊಳಚೆ ಪ್ರದೇಶಗಳಿಗೆ ಸೋಲಾರ್ ವಿದ್ಯುತ್ ನೀಡಲು ನಿರ್ಧರಿಸಿದೆ.

ಇಂಥ ಸ್ಲಂ ಗಳಲ್ಲಿ ಸುಮಾರು 8 ಸಾವಿರ ಮನೆಗಳಲ್ಲಿ ಇನ್ನೂ ಸೀಮೆ ಎಣ್ಣೆ ದೀಪಗಳ ಬಳಕೆ ಮಾಡಲಾಗುತ್ತದೆ. ಪ್ರತಿನಿತ್ಯ ಸೀಮೆ ಎಣ್ಣೆ ಬಳಕೆಯಿಂದ ವಾಯು ಮಾಲಿನ್ಯ ಹೆಚ್ಚುತ್ತದೆ.

ಅತಿ ಹೆಚ್ಚಿನ ಪ್ರಮಾಣದ ಜನಸಂಖ್ಯೆ ಇರುವ ದೇಶಗಳಲ್ಲಿ ಸೀಮೆ ಎಣ್ಣೆ ಬಳಸುವುದರಿಂದ ಮಾರಣಾಂತಿಕ  ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪೊಲ್ಲಿನೇಟ್ ಕಂಪನಿ ಮೊದಲಿಗೆ ಬೆಂಗಳೂರಿನ ಸ್ಲಂ ನಿವಾಸಿಗಳಿಗೆ 7 ಸಾವಿರ ಸೋಲಾರ್ ಲೈಟ್ಸ್ ನೀಡಲು ಮುಂದಾಗಿದೆ,. ಈ ಸೋಲಾರ್ ಲೈಟ್ ನಿಂದ ಮೊಬೈಲ್ ಚಾರ್ಜ್ ಕೂಡ ಮಾಡಬಹುದಾಗಿದೆ.

ಭಾರತದಲ್ಲಿ ಮೊದಲ ಸೋಲಾರ್ ಲೈಟ್ ನೀಡಲು ಬೆಂಗಳೂರನ್ನು ಆರಿಸಿಕೊಳ್ಳಲಾಗಿದೆ, ನಂತರ ಇತರ ನಗರಗಳಲ್ಲೂ ಸೋಲಾರ್ ಲೈಟ್ ಅಳವಡಿಕೆ ಕಾರ್ಯ ನಡೆಯಲಿದೆ. ಪ್ರತಿ ಸೋಲಾರ್ ಲ್ಯಾಂಪ್ ಗೆ 23 ಆಸ್ಟ್ರೇಲಿಯನ್ ಡಾಲರ್ ನೀಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com