
ನವದೆಹಲಿ/ಬಾಲಿ: ಭೂಗತ ದೊರೆ ಚೋಟಾ ರಾಜನ್‍ನನ್ನು ಕರೆತರಲು ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಪಡೆ ಭಾನುವಾರ ಇಂಡೋನೇಷ್ಯಾಗೆ ತಲುಪಿದೆ.
ಎರಡು ದಿನಗಳ ಹಿಂದೆ ಇಂಡೋನೇಷ್ಯಾದ ಅಧಿಕಾರಿಗಳಿಗೆ ಭಾರತ ಸರ್ಕಾರ ಪತ್ರ ಬರೆದು ರಾಜನ್ ನನ್ನು ಕಳಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಕೋರಿತ್ತು. ಕಳೆದ ವಾರ ಬಾಲಿ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದ್ದ ರಾಜನ್‍ನನ್ನು ಪ್ರಸ್ತುತ ಅಲ್ಲಿನ ಜೈಲೊಂದರಲ್ಲಿ ಇರಿಸಲಾಗಿದೆ.
ಜಕಾರ್ತಾದ ಭಾರತೀಯ ರಾಯಭಾರ ಕಚೇರಿ ಕಾರ್ಯದರ್ಶಿ ಸಂಜೀವ ಕುಮಾರ್ ಅಗರ್‍ವಾಲ್ ಅವರು ರಾಜನ್‍ನನ್ನು ಭೇಟಿ ಮಾಡಿ ಅರ್ಧ ಗಂಟೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತೀಯ ಅಧಿಕಾರಿಯೊಬ್ಬರು ರಾಜನ್‍ನನ್ನು ಭೇಟಿ ಮಾಡಿದ್ದಾರೆ. ಇಂಡೋನೇಷ್ಯಾ ಜತೆ ಭಾರತಕ್ಕೆ ಯಾವುದೇ ಗಡೀಪಾರು ಒಪ್ಪಂದಗಳಿಲ್ಲದ ಕಾರಣ ಆತನ ಹಸ್ತಾಂತರಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರ ಕೋರಿತ್ತು. ಹಸ್ತಾಂತರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆದರೆ ಇದಕ್ಕೆ ಸಮಯದ ಮಿತಿ ಹೇರಿಲ್ಲವೆಂದು ಇಂಡೋನೇಷ್ಯಾದ ಭಾರತೀಯ ರಾಯಭಾರಿ ಗುರ್ಜಿತ್ ಸಿಂಗ್ ಹೇಳಿದ್ದಾರೆ. ರಾಜನ್ ಮೇಲಿನ ಹೆಚ್ಚಿನ ಪ್ರಕರಣಗಳು ಮುಂಬೈ ಪೊಲೀಸರಲ್ಲಿದ್ದು, ಅವರು ಆತನನ್ನು ಮೊದಲು ವಶಕ್ಕೆ ತೆಗೆದುಕೊಳ್ಳಲಿದ್ದಾರೆ
Advertisement