

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್‌ನನ್ನು ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ.
ದೆಹಲಿಗೆ ಬಂದಿಳಿದ ಕೆಲವೇ ತಾಸಿನ ಬಳಿಕ ರಾಜನ್‌ನನ್ನು ಬಂಧಿಸಿದ ಸಿಬಿಐ, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಈ ವೇಳೆ ನ್ಯಾಯಾಲಯ ರಾಜನ್‌ನನ್ನು ಸಿಬಿಐ ವಶಕ್ಕೆ ನೀಡಿದೆ.
ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಹೊಂದಿದ್ದ ಛೋಟಾ ರಾಜನ್‌ನನ್ನು ಅಕ್ಟೋಬರ್ 25ರಂದು ಇಂಡೋನೇಶಿಯಾದ ಬಾಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ವಂಚನೆ, ನಕಲಿ ದಾಖಲೆ ಸೃಷ್ಟಿ ಆರೋಪದಡಿ ರಾಜನ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ರಾಜನ್ ವಿರುದ್ಧದ ಪ್ರಕರಣಗಳನ್ನು ಮುಂಬಯಿ ಪೊಲೀಸರು ಔಪಚಾರಿಕವಾಗಿ ಇನ್ನೂ ಹಸ್ತಾಂತರಿಸಿಲ್ಲ. ಜತೆಗೆ, ಆತನ ವಿರುದ್ಧ ದೆಹಲಿಯಲ್ಲಿ ಯಾವುದೇ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಸಿಬಿಐ ಸದ್ಯ ಆತನ ವಿರುದ್ಧ ನಕಲಿ ಪಾಸ್ ಪೋರ್ಟ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ.