

ಪಾಟ್ನ: ಬಹು ನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ನೇತೃತ್ವದ ಮಹಾಮೈತ್ರಿಕೂಟ ವಿಜಯ ಸಾಧಿಸಿತ್ತು, ಬಿಜೆಪಿ ಭಾನುವಾರ ತನ್ನ ಸೋಲನ್ನು ಒಪ್ಪಿಕೊಂಡಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು, ಮೈತ್ರಿ ಗಣಿತದ ಪರಿಣಾಮವಾಗಿ ಬಿಜೆಪಿ ಸೋಲನ್ನು ಕಂಡಿದೆ ಎಂದು ಹೇಳಿದ್ದಾರೆ.
ಜನರ ಮನಸ್ಥಿತಿ ಹಾಗೂ ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲವಾಗಿದ್ದು. ನಮ್ಮ ಚುನಾವಣಾ ತಂತ್ರವನ್ನು ಬದಲಾಯಿಸಿಕೊಳ್ಳುತ್ತೇವೆಂದು ಬಿಜೆಪಿ ಉಪಾಧ್ಯಕ್ಷ ಪ್ರಭಾತ್ ಝಾ ಅವರು ಹೇಳಿದ್ದಾರೆ.