ಬಿಹಾರದಲ್ಲಿ ಮಹಾಮೈತ್ರಿ ಆರ್ಭಟ

ರಾಷ್ಟ್ರಾದ್ಯಂತ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಭಾನುವಾರ ಹೊರಬಿದ್ದಿದ್ದು, ಮಹಾಮೈತ್ರಿ ಕೂಟ ರಚಿಸಿಕೊಂಡಿದ್ದ ಜೆಡಿಯು ಭರ್ಜರಿ ಗೆಲವು ಸಾಧಿಸಿದೆ...
ಸಂಭ್ರಮದಲ್ಲಿ ಕಾರ್ಯಕರ್ತರು
ಸಂಭ್ರಮದಲ್ಲಿ ಕಾರ್ಯಕರ್ತರು
Updated on: 

ಪಾಟ್ನ: ರಾಷ್ಟ್ರಾದ್ಯಂತ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಭಾನುವಾರ ಹೊರಬಿದ್ದಿದ್ದು, ಮಹಾಮೈತ್ರಿ ಕೂಟ ರಚಿಸಿಕೊಂಡಿದ್ದ ಜೆಡಿಯು ಭರ್ಜರಿ ಗೆಲವು ಸಾಧಿಸಿದೆ.

ಬಿಹಾರದಲ್ಲಿ ಜೆಡಿಯು-ಆರ್ ಜೆಡಿ ನೇತೃತ್ವದ ಮಹಾಘಟ್ ಬಂಧನ ಮೈತ್ರಿಕೂಟ ಗೆಲುವಿನ ನಗೆ ಬೀರಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಸ್ಪಷ್ಟ ಬಹುಮತ ಬರುತ್ತಿದ್ದಂತೆ ರಾಷ್ಟ್ರೀಯ ಜನತಾದಳ ಹಾಗೂ ಜೆಡಿಯು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿಕೊಳ್ಳುವುದರ ಮೂಲಕ ತಮ್ಮ ಸಂಭ್ರವನ್ನು ಆಚರಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವಣ ಜಿದ್ದಾಜಿದ್ದಿ ಎಂದೇ ಬಿಂಬಿತವಾಗಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮಹಾಮೈತ್ರಿಕೂಟ (178) ಸ್ಥಾನಗಳಲ್ಲಿ ಪ್ರಚಂಡ ಜಯಭೇರಿ ಬಾರಿಸಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು ಬೇಕಾಗಿರುವ ಸ್ಥಾನಗಳ ಸಂಖ್ಯೆ 122. ಆ ನಿಟ್ಟಿನಲ್ಲಿ ಜೆಡಿಯು ಮಹಾಮೈತ್ರಿಕೂಟ ಆ ಮ್ಯಾಜಿಕ್ ನಂಬರ್ ನ ಸ್ಪಷ್ಟ ಬಹುಮತ ಪಡೆದಿದೆ. ಹಾಗಾಗಿ ನಿತೀಶ್ ಕುಮಾರ್ 5ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗುವುದು ಖಚಿತ. ಅಚ್ಚರಿ ಎಂಬಂತೆ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪಕ್ಷವೂ ಕಳೆದ ಬಾರಿ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಉತ್ತಮ ಚೇತರಿಕೆ ಕಂಡಿದೆ. 5 ಹಂತಗಳಲ್ಲಿ ನಡೆದಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಹಾರ ಮತದಾರನ ತೀರ್ಪು ಬಹಿರಂಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com