ಚುನಾವಣಾ ಫಲಿತಾಂಶ ವಿಭಜನೆ ವಿರುದ್ಧದ ಏಕತೆಯ ಗೆಲುವು: ರಾಹುಲ್ ಗಾಂಧಿ

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವೊಂದು ವಿಭಜನೆಯ ವಿರುದ್ಧದ ಏಕತೆಯ ಗೆಲುವು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾನುವಾರ ಹೇಳಿದ್ದಾರೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವೊಂದು ವಿಭಜನೆಯ ವಿರುದ್ಧದ ಏಕತೆಯ ಗೆಲುವು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾನುವಾರ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತಂತೆ ಇಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಹಾರ ಚುನಾವಣಾ ಫಲಿತಾಂಶವೊಂದು ವಿಭಜನೆ ವಿರುದ್ಧದ ಏಕತೆಯ ಗೆಲುವಾಗಿದೆ. ಅಹಂಕಾರ ವಿರುದ್ಧದ ಮಾನವೀಯತೆಯ ಜಯ. ದ್ವೇಷದ ವಿರುದ್ಧದ ಪ್ರೀತಿಯ ಗೆಲವು. ಈ ಗೆಲವು ಬಿಹಾರ ಜನತೆಯ ಗೆಲವು ಎಂದು ಹೇಳಿದ್ದಾರೆ

ಬಿಹಾರ ಗೆಲುವಿಗಾಗಿ ಬಿಹಾರದ ಜನತೆ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಕಾಂಗ್ರೆಸ್ ನಾಯಕರು, ಎಲ್ಲಾ ಕಾರ್ಯಕರ್ತರು ಹಾಗೂ ಮಹಾ ಮೈತ್ರಿ ಕೂಟಕ್ಕೆ ಅಭಿನಂದನೆಗಳು ಎಂದು ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com