ನವದೆಹಲಿ: ಬಿಹಾರದಲ್ಲಿ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದ್ದ ಬಿಜೆಪಿ ನಾಯಕರು ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕ ನಿರ್ಧರಿಸುವ ಸಂಬಂಧ ಫಲಿತಾಂಶ ಪ್ರಕಟವಾದ ಭಾನುವಾರದ ಬಳಿಕವೇ ಸಭೆ ಕರೆಯ ಬಯಸಿದ್ದರು. ಅವರ ಲೆಕ್ಕಾ ಚಾರ ಈಗ ಉಲ್ಟಾ ಆಗಿದೆ. ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನಿಂ ದಾಗಿ ಸಂಸತ್ತಿನಲ್ಲಿ ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳಿಗೆ ಇನ್ನಷ್ಟು ಬಲ ನೀಡಿದಂತಾಗಿದೆ. ಅಧಿವೇಶನ ಈ ತಿಂಗಳಾಂತ್ಯದಲ್ಲೇ ನಡೆಯಲಿದೆ. ಬಿಜೆಪಿ ಗೆದ್ದಿದ್ದರೆ ನನೆಗುದಿಗೆ ಬಿದ್ದಿದ್ದ ಸುಧಾರಣಾ ವಿಧೇಯಕಗಳಿಗೆ ಅಂಗೀಕಾರ ಪಡೆಯುವುದು ಸರ್ಕಾರಕ್ಕೆ ಸುಲಭ ವಾಗುತ್ತಿತ್ತು. ಈಗ ಜಿಎಸ್‍ಟಿ, ರಿಯಲ್ ಎಸ್ಟೇಟ್, ಕಾರ್ಮಿಕರ ಸುಧಾರಣಾ ವಿಧೇಯಕಗಳು ಮತ್ತೆ ಮೂಲಗುಂಪಾಗುವ ಸಾಧ್ಯತೆಗಳಿವೆ.