ಮುಂಬೈ: ಭಾರತದಲ್ಲಿ ವಾಣಿಜ್ಯ ಮತ್ತು ಸಾಮಥ್ರ್ಯ ವಿಸ್ತರಣೆಗೆ ರು.13,000 ಕೋಟಿ ಬಂಡವಾಳ ತೊಡಗಿಸುವುದಾಗಿ ದೂರಸಂಪರ್ಕ ಸೇವಾ ಕಂಪನಿ ವೊಡಾಫೋನ್ ಪ್ರಕಟಿಸಿದೆ. .ಪೇಮೆಂಟ್ ಬ್ಯಾಂಕ್ ಗಳಿಗೆ ಅಗತ್ಯವಾದ ನೆಟ್‍ವರ್ಕ್ ವಿಸ್ತರಿಸಲು ದೇಶದಲ್ಲಿ ಹೊಸ ಡೇಟಾ ಕೇಂದ್ರವನ್ನು ಸ್ಥಾಪಿಸಲು ಈ ಬಂಡವಾಳ ಬಳಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ..ಈ ಬಂಡವಾಳದಲ್ಲಿ 8 ಸಾವಿರ ಕೋಟಿ ನೆಟ್ ವರ್ಕ್ ವಿಸ್ತರಣೆ, 3 ಸಾವಿರ ಕೋಟಿ ಸಾಮಥ್ರ್ಯ ಹೆಚ್ಚಳ, ಸಾವಿರ ಕೋಟಿ ಹೈಟೆಕ್ ಟಯರ್-4 ಡೇಟಾ ಕೇಂದ್ರ ಸ್ಥಾಪಿಸಲು ಹೂಡಿಕೆ ಮಾಡಲಾಗುವುದು. .ಉಳಿದ ಸಾವಿರ ಕೋಟಿಗಳನ್ನು ಪೇಮೆಂಟ್ ಬ್ಯಾಂಕ್ ಗಳಿಗೆ ಅಗತ್ಯವಾದ ಅಂತರಜಾಲ ರೂಪಿಸಲು ಬಳಸಲಾಗುವುದು ಎಂದು ಕಂಪನಿ ಹೇಳಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics