ವಾಘಾ ಬಾರ್ಡರ್: ಜೀಪನ್ನು ಭಾರತ-ಪಾಕ್‌ ಗಡಿ ಗೇಟ್‌ಗೆ ಗುದ್ದಿದ ಎನ್‌ಆರ್‌ಐ

ಬಾರಿ ಭದ್ರತಾಯುಲ್ಲ ವಾಘಾ- ಅಟ್ಟಾರಿ ಗಡಿಯಲ್ಲಿ ಜೀಪನ್ನು ಅನಿವಾಸಿ ಭಾರತೀಯನೊಬ್ಬ ಅಟ್ಟಾರಿ ಚೆಕ್‌ ಪೋಸ್ಟ್‌ ಗೇಟ್‌ಗೆ ಗುದ್ದಿರುವ ಘಟನೆ ನಡೆದಿದೆ...
ಜೀಪ್ ಗೇಟಿಗೆ ಗುದ್ದಿರುವ ಚಿತ್ರ
ಜೀಪ್ ಗೇಟಿಗೆ ಗುದ್ದಿರುವ ಚಿತ್ರ
Updated on
ಅಮೃತಸರ: ಬಾರಿ ಭದ್ರತಾಯುಲ್ಲ ವಾಘಾ- ಅಟ್ಟಾರಿ ಗಡಿಯಲ್ಲಿ ಜೀಪನ್ನು ಅನಿವಾಸಿ ಭಾರತೀಯನೊಬ್ಬ ಅಟ್ಟಾರಿ ಚೆಕ್‌ ಪೋಸ್ಟ್‌ ಗೇಟ್‌ಗೆ ಗುದ್ದಿರುವ ಘಟನೆ ನಡೆದಿದೆ. 
ಪಂಜಾಬ್‌ನ ಜಲಂಧರ್‌ ಮೂಲದ ಸುರೀಂದರ್‌ ಸಿಂಗ್‌ ಕಂಗ್‌ (42) ಕೆನಡಾದಿಂದ ಆಗಮಿಸಿದ್ದು, ಸೋಮವಾರ ಬೆಳಗಿನ ಜಾವ ತಮ್ಮ ಜೀಪನ್ನು ಮೊದಲು ಭಾರತ ಕಡೆಯ ಗೇಟಿಗೆ ಗುದ್ದಿ ನಂತರ ಪಾಕಿಸ್ತಾನ ಗೇಟಿಗೆ ಗುದ್ದಿದ್ದಾನೆ ಈ ಸಂಬಂಧ ಆರೋಪಿಯನ್ನು ಬಿಎಸ್‌ಎಫ್ ಅಧಿಕಾರಿಗಳು ಬಂಧಿಸಿದ್ದಾರೆ. 
ಆರೋಪಿಯಿಂದ ಸ್ಥಳದಲ್ಲಿ ಮನಸ್ಸಿಗೆ ವಿಶ್ರಾಂತಿ ನೀಡುವ ಕೆಲ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನನ್ನು ಪಂಜಾಬ್‌ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com