

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಮಗಳ ಮದುವೆ ಬರುವಂತೆ ಆಹ್ವಾನ ನೀಡಿದ್ದಾರೆ.
ಡಿಸೆಂಬರ್‌ನಲ್ಲಿ ನಡೆಯುವ ತಮ್ಮ ಪುತ್ರಿಯ ಮದುವೆಯ ಆಮಂತ್ರಣ ನೀಡಲು ಜೇಟ್ಲಿ ಅವರು ಇಂದು ರಾಹುಲ್ ಹಾಗೂ ಸೋನಿಯಾ ನಿವಾಸಕ್ಕೆ ತೆರಳಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಜೇಟ್ಲಿ ಅವರ ಪುತ್ರಿ ಸಹ ತಂದೆಯಂತೆ ವೃತ್ತಿಯಲ್ಲಿ ವಕೀಲರಾಗಿದ್ದಾರೆ.