ಇತರೆ ಉಗ್ರರೊಂದಿಗೆ ಅಪಾರ್ಟ್‍ಮೆಂಟ್ ಒಳಗಿದ್ದ ಮಹಿಳಾ ಬಾಂಬರ್ ಆತ್ಮಾಹುತಿ ಬೆಲ್ಟ್ ಧರಿಸಿಕೊಂಡು, ತನ್ನನ್ನು ತಾನೇ ಸ್ಫೋಟಿಸಿಕೊಂಡಳು. ಒಟ್ಟಿನಲ್ಲಿ ಕಾರ್ಯಾಚರಣೆ ಮುಗಿಯುವ ವೇಳೆಗೆ ಇಬ್ಬರು ಶಂಕಿತ ಉಗ್ರರು ಹತರಾದರೆ, 7 ಮಂದಿ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ. ಈ ಪೈಕಿ ಉಗ್ರರಿಗೆ ಅಪಾರ್ಟ್‍ಮೆಂಟ್ ಅನ್ನು ಬಾಡಿಗೆ ನೀಡಿದಾತ ಮತ್ತು ಆತನ ಸ್ನೇಹಿತನೂ ಸೇರಿದ್ದಾರೆ. ಕಾರ್ಯಾಚರಣೆ ವೇಳೆ, ಐವರು ಪೊಲೀಸರು ಗಾಯಗೊಂಡಿದ್ದಾರೆ.