ಅಮಿರ್ ಖಾನ್ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ: ಅಸಾದುದ್ದೀನ್ ಓವೈಸಿ

ಅಸಹಿಷ್ಣುತೆ ವಿವಾದ ಕುರಿತಂತೆ ನಟ ಅಮಿರ್ ಖಾನ್ ನೀಡಿದ್ದ ಹೇಳಿಕೆಯನ್ನು ವಿರೋಧಿರಿಸುವ ಎಂಐಐಎಂ ಅಸಾದುದ್ದೀನ್ ಓವೈಸಿ ಅವರು ಅಮಿರ್ ಖಾನ್ ಅಸಂಬದ್ಧ ಹೇಳಿಕೆಯನ್ನು ನೀಡುತ್ತಿದ್ದಾರೆಂದು ಮಂಗಳವಾರ ಹೇಳಿದ್ದಾರೆ...
ಎಂಐಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (ಸಂಗ್ರಹ ಚಿತ್ರ)
ಎಂಐಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಅಸಹಿಷ್ಣುತೆ ವಿವಾದ ಕುರಿತಂತೆ ನಟ ಅಮಿರ್ ಖಾನ್ ನೀಡಿದ್ದ ಹೇಳಿಕೆಯನ್ನು ವಿರೋಧಿರಿಸುವ ಎಂಐಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಅಮಿರ್ ಖಾನ್ ಅಸಂಬದ್ಧ ಹೇಳಿಕೆಯನ್ನು ನೀಡುತ್ತಿದ್ದಾರೆಂದು ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅಮಿರ್ ಖಾನ್ ನೀಡಿರುವಂತಹ ಹೇಳಿಕೆಯನ್ನು ನಾನು ಎಂದಿಗೂ ನೀಡಿಲ್ಲ. ದೇಶದಲ್ಲಿ ಸಾಕಷ್ಟು ಗಲಭೆಗಳು ಸೃಷ್ಟಿಯಾಗಿತ್ತು. ಆದರೂ, ನಾವು ನಮ್ಮ ದೇಶದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾವು ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಡುತ್ತೇವೆ. ನಮ್ಮ ದೇಶವನ್ನು ಅಭಿವೃದ್ಧಿಪಡಿಸಲು ನಾವು ದುಡಿಯುತ್ತೇವೆ, ಶ್ರಮಿಸುತ್ತೇವೆ. ಅಸಂಬದ್ಧ ಹೇಳಿಕೆಗಳಿಂದ ಎಂದಿಗೂ ಚರ್ಚೆಗೀಡಾಗುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com