ಬಾಂಡ್ ಚಿತ್ರ ನೋಡಿಯೇ ಇಲ್ಲ

ಸೆನ್ಸಾರ್ ಮಂಡಳಿಯಿಂದ ಕತ್ತರಿಗೊಳಗಾದ ಬಾಂಡ್ ಚಿತ್ರ `ಸ್ಪೆಕ್ಟರ್' ಅನ್ನು ತಾನು ನೋಡಿಯೇ ಇಲ್ಲ ಎಂದು ಸೆನ್ಸಾರ್...
ಸ್ಪೆಕ್ಟರ್ ಚಿತ್ರದ ಸ್ಟಿಲ್
ಸ್ಪೆಕ್ಟರ್ ಚಿತ್ರದ ಸ್ಟಿಲ್
Updated on
ನವದೆಹಲಿ: ಸೆನ್ಸಾರ್ ಮಂಡಳಿಯಿಂದ ಕತ್ತರಿಗೊಳಗಾದ ಬಾಂಡ್ ಚಿತ್ರ `ಸ್ಪೆಕ್ಟರ್' ಅನ್ನು ತಾನು ನೋಡಿಯೇ ಇಲ್ಲ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಹೇಳಿದ್ದಾರೆ. 
ಚಿತ್ರವನ್ನು ಕತ್ತರಿಸಿದ್ದು ನಿಯಮಗಳಿಗೆ ಅನುಗುಣವಾಗಿದೆ ಎಂದಿದ್ದಾರೆ. ``ಸಿನೆಮಾ ಪರೀಕ್ಷಾ ಮಂಡಳಿಯಲ್ಲಿ ನನ್ನ ಪಾತ್ರವಿಲ್ಲ. ಅಧ್ಯಕ್ಷನಾಗಿ ನಾನು ಚಿತ್ರ ನೋಡಲೇಬೇಕೆಂಬ ನಿಯಮವಿಲ್ಲ. ನಾನು ಅಧ್ಯಕ್ಷ ನಿಜ, ಆದರೆ ಚಿತ್ರ ನೋಡುವುದು ತನ್ನ ಕೆಲಸವಲ್ಲ. 
ಸಿನೆಮಾದ ಒಂದು ದೃಶ್ಯವನ್ನೂ ನಾನು ನೋಡಿಲ್ಲ. ಚರ್ಚೆಗೊಳಗಾಗುತ್ತಿರುವ ಚುಂಬನದ ದೃಶ್ಯವನ್ನೂ ನೋಡಿಲ್ಲ'' ಎಂದು ಟೈಮ್ಸ್ ನೌಟಿವಿಗೆ ಹೇಳಿದ್ದಾರೆ. ಹಾಗಿದ್ದೂ ಕತ್ತರಿಸಲು ಅನು ಮತಿ ನೀಡಿದ್ಯಾಕೆ ಎಂಬ ಪ್ರಶ್ನೆಗೆ, ನನ್ನ ಮಂಡಳಿ ಅದನ್ನು ನೋಡಿದೆ, ಸಾಕು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com