ಯುವಕರನ್ನು ಜಿಹಾದ್‍ನತ್ತ ಸೆಳೆಯಲು ಪ್ರೇರಿಸುವಂಥ ಹೇಳಿಕೆ ಮತ್ತು ದೃಶ್ಯಗಳನ್ನು ಈ ವೆಬ್‍ಸೈಟ್‍ಗಳಲ್ಲಿ ಸೇರಿಸಲಾಗುತ್ತಿತ್ತು. ಈ ಮಧ್ಯೆ, ತನ್ನ ಮಗ ಇಸಿಸ್ ಪರ ನೇಮಕಾತಿ ನಡೆಸಿಲ್ಲ ಎಂದು ದುಬೈನಿಂದ ಸ್ಪಷ್ಟನೆ ನೀಡಿರುವ ಅದ್ನಾನ್ ತಂದೆ ಹುಸೇನ್ ದಾಮುದಿ, ಆತ ಕೇವಲ ಇಸಿಸ್ ಸಂಘಟನೆಯ ಫೇಸ್‍ಬುಕ್ ಪುಟವನ್ನು ಲೈಕ್ ಮಾಡಿದ್ದು, ಇಸಿಸ್ ಪರ ಸಂದೇಶಗಳನ್ನು ಟ್ವೀಟ್ ಮಾಡಿದ್ದಾನಷ್ಟೇ ಎಂದಿದ್ದಾರೆ.