ಅಮಿರ್ ಖಾನ್ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸ್ನಾಪ್ ಡೀಲ್

ಅಸಹಿಷ್ಣುತೆ ಕುರಿತು ಬಾಲಿವುಡ್ ನಟ ಅಮಿರ್ ಖಾನ್ ಹೇಳಿಕೆ ವಿಚಾರದಲ್ಲಿ ಅಂತರ ಕಾಯ್ದುಕೊಂಡಿರುವ ಇ-ಕಾಮರ್ಸ್...
ಅಮಿರ್ ಖಾನ್
ಅಮಿರ್ ಖಾನ್
ನವದೆಹಲಿ: ಅಸಹಿಷ್ಣುತೆ ಕುರಿತು ಬಾಲಿವುಡ್ ನಟ ಅಮಿರ್ ಖಾನ್ ಹೇಳಿಕೆ ವಿಚಾರದಲ್ಲಿ ಅಂತರ ಕಾಯ್ದುಕೊಂಡಿರುವ ಇ-ಕಾಮರ್ಸ್ ಕಂಪನಿ ಸ್ನಾಪ್ ಡೀಲ್, ಅಮಿರ್ ಖಾನ್ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದೆ. 
ಅಸಹಿಷ್ಣುತೆ ಬಗ್ಗೆ ಅಮೀರ್ ಖಾನ್ ಹೇಳಿಕೆಗಳನ್ನು ಒಪ್ಪದ ಹಲವರು ಸ್ನಾಪ್ ಡೀಲ್ ಅಪ್ಲಿಕೇಷನ್ ಅನ್ನು ಅನ್-ಇನ್'ಸ್ಟಾಲ್ ಮಾಡುತ್ತಿರುವುದಾಗಿ ಪ್ರಕಟಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸ್ಪಷ್ಟನೇ ನೀಡಿರುವ ಸ್ನಾಪ್ ಡೀಲ್, ಅಮಿರ್ ಖಾನ್ ಹೇಳಿಕೆಗೂ, ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಅಮಿರ್ ಖಾನ್ ಸ್ನಾಪ್‍ಡೀಲ್ ಕಂಪನಿಯ ಬ್ರಾಂಡ್ ರಾಯಬಾರಿಯಾಗಿದ್ದಾರೆ. ಸ್ನಾಪ್‍ಡೀಲ್ ಭಾರತದ ಹೆಮ್ಮೆಯ ಕಂಪನಿ. ಯುವಕರು ಡಿಜಿಟಲ್ ಇಂಡಿಯಾದತ್ತ ನೋಟ ಹರಿಸಿದ್ದಾರೆಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com