ತಮ್ಮ ಧರ್ಮದ ಯುವತಿ ಈ ರೀತಿ ಬರೆದಿರುವುದಕ್ಕೆ ಕೆಲವರು ಕೆರಳಿದ್ದಾರೆ. ನಾವು ಈ ರೀತಿ ಮುಕ್ತವಾಗಿ ಮಾತನಾಡಿದರೆ ಇನ್ನೇನು ಬಹಿರಂಗವಾಗುತ್ತದೋ ಎಂಬ ಭಯ ಅವರಿಗಿದ್ದ ಕಾರಣವೇ, ಮಹಿಳೆಯರು ಹೀಗೆಲ್ಲಾ ಮಾತನಾಡಬಾರದೆಂದು ಕಟ್ಟಳೆ ವಿಧಿಸುತ್ತಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡುವ ಬದಲು ತಮ್ಮ ಧರ್ಮದಲ್ಲಿರುವ ಮಹಿಳೆಯರಿಗೆ ಅವರು ನ್ಯಾಯ ಒದಗಿಸಲಿ. ಇಂಥಾ ಸಮಸ್ಯೆಗಳ ಬಗ್ಗೆ ಮೌನವಾಗಿ ಕುಳಿತರೆ ಪರಿಹಾರ ಸಿಗಲ್ಲ ಅಂತಾರೆ ರಜೀನಾ.