

ಬರೇಲಿ: 15 ಮಂದಿ ಹಿಂದೂ ದೋಷಿಗಳಿಗೆ ಜಾಮೀನು ಉತ್ತರ ಪ್ರದೇಶ ಮುಸ್ಲಿಮರು 50 ಸಾವಿರ ರೂ. ಸಂಗ್ರಹಿಸಿ ಆರೋಪಿಗಳನ್ನು ಮುಕ್ತವಾಗಿಸಿದ್ದಾರೆ.
ಟಿಕೆಟ್ ಇಲ್ಲದೆ ಪ್ರಯಾಣ ಸೇರಿದಂತೆ, ಸಣ್ಣ ಪುಟ್ಟ ಆರೋಪಗಳಿಂದ ಜಿಲ್ಲಾ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದ ದೋಷಿಗಳು, ಸಣ್ಣ ಮೊತ್ತದ ದಂಡವನ್ನೂ ಕಟ್ಟಲಾದಗದೇ ಶಿಕ್ಷೆ ಅನುಭವಿಸುತ್ತಿದ್ದರು. ಇಂಥ 15 ಕೈದಿಗಳ ಬಿಡುಗಡೆಗೆ ಮುಸ್ಲಿಮ್ ಬಾಂಧವರು ಪಣ ತೊಟ್ಟಿ 50 ಸಾವಿರ ರು. ಹಣ ಸಂಗ್ರಹಿಸಿ ಅವರಿಗೆ ಜಾಮೀನು ನೀಡಿ ಜೈಲಿನಿಂದ ಬಿಡುಗಡೆಗೊಳಿಸಿದ್ದಾರೆ.
ಬಿಡುಗಡೆಯಾದ ಕೈದಿಗಳನ್ನು ದಂಡ ಕಟ್ಟಿದ ಮುಸ್ಲಿಮರು ಆತ್ಮೀಯವಾಗಿ ಸ್ವಾಗತಿಸಿದರು. ಬಿಡುಗಡೆಯ ಭಾಗ್ಯ ಸಿಕ್ಕವರಿಗೂ ಆನಂದ ಬಾಷ್ಪ ಉಕ್ಕಿ ಹರಿಯಿತು. ಕೇವಲ 1,000 ರೂ. ದಂಡ ಕಟ್ಟಲಾಗದೇ ಟಿಕೆಟ್ ಇಲ್ಲದ ಪಯಾಣಿಸಿದ ತಪ್ಪಿಗೆ ನಂದ ಕಿಶೋರ್ ಎಂಬಾತ ಸೆರೆವಾಸ ಅನುಭವಿಸುತ್ತಿದ್ದ, ಇಂಥ ಒಟ್ಟು 15 ಮಂದಿಯನ್ನು ಬಿಡುಗಡೆಗೆ ಶ್ರಮಿಸಿದ ಹಾಜಿ ಯಾಸಿನ್ ಖುರೇಷಿ ಮತ್ತು ಸ್ನೇಹಿತರ ಸಹಾಯವನ್ನು ಸ್ಮರಿಸಿದರು.