

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯನೋರ್ವ ಪಾಕಿಸ್ಥಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಸೇರಿಕೊಂಡಿದ್ದಾನೆಂಬುದು ಈಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ತೀವ್ರ ಇರಿಸುಮುರಿಸು ಉಂಟುಮಾಡಿದೆ.
ಪಾಕ್ ಬೇಹುಗಾರನೆಂದು ಕಂಡು ಬಂದ ಕಾರಣಕ್ಕೆ ಬಂಧಿತನಾಗಿರುವ ಇರ್ಷಾದ್ ಅನ್ಸಾರಿ ಭಾರತೀಯ ನೌಕಾಪಡೆಗೆ ಸಮರ ನೌಕೆಗಳನ್ನು ನಿರ್ಮಿಸಿಕೊಡುವ ಗಾರ್ಡನ್ ರೀಚ್ ಶಿಪ್ ಬಿಲ್ಡರ್ ಕಂಪೆನಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದಾನೆ.
ಈತನ ಮಗ ಅಷ್ಫಾಕ್ ಅನ್ಸಾರಿ ಕೂಡ ಪಾಕ್ ಬೇಹುಗಾರಿಕೆ ಜಾಲದಲ್ಲಿ ಶಾಮೀಲಾಗಿರುವ ವ್ಯಕ್ತಿ ಎಂದು ಬಂಧಿಸಲ್ಪಟ್ಟಿದ್ದಾನೆ. ಅಷ್ಫಾಕ್ ಅನ್ಸಾರಿ ಯು ಭಾರತೀಯ ಸೇನೆಯ ಅಮೂಲ್ಯ ರಹಸ್ಯ ಮಾಹಿತಿಗಳನ್ನು ಐಎಸ್‌ಐಗೆ ಒದಗಿಸಿರುವುದಾಗಿ ಸಿಎನ್‌ಎನ್ ಐಬಿಎನ್ ಸುದ್ದಿ ವಾಹಿನಿ ವರದಿ ಮಾಡಿದೆ.