ಶತಮಾನದ ದಾಖಲೆ ಮುರಿದ ಚೆನ್ನೈ ಮಳೆ

ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಸಾಕೆನ್ನುವಷ್ಟು ಮಳೆಯಾಗುತ್ತಿದ್ದು, ಕಳೆದ 1 ತಿಂಗಳಿಂದ ಸುರಿಯುತ್ತಿರುವ ಮಳೆ ಇದೀಗ 100 ವರ್ಷಗಳ ದಾಖಲೆಯನ್ನು ಮುರಿದಿದೆ...
ಮಳೆಯಿಂದಾಗಿ ಜಲಾವೃತವಾಗಿರುವ ರಸ್ತೆಗಳು (ಸಂಗ್ರಹ ಚಿತ್ರ)
ಮಳೆಯಿಂದಾಗಿ ಜಲಾವೃತವಾಗಿರುವ ರಸ್ತೆಗಳು (ಸಂಗ್ರಹ ಚಿತ್ರ)
Updated on: 

ಚೆನ್ನೈ: ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಸಾಕೆನ್ನುವಷ್ಟು ಮಳೆಯಾಗುತ್ತಿದ್ದು, ಕಳೆದ 1 ತಿಂಗಳಿಂದ ಸುರಿಯುತ್ತಿರುವ ಮಳೆ ಇದೀಗ 100 ವರ್ಷಗಳ ದಾಖಲೆಯನ್ನು ಮುರಿದಿದೆ.

1918ರಲ್ಲಿ ಸುರಿದ ಮಳೆ 108.8 ಸೆಂ.ಮೀನಷ್ಟು ಮಳೆಯಾಗಿದ್ದು, ಅಂದು ಸುರಿದ ಮಳೆಯೇ ಈ ವರೆಗೂ ಅತೀ ಹೆಚ್ಚಿನ ಮಳೆಯಾಗಿತ್ತು ಎಂದು ಹೇಳಲಾಗುತ್ತಿದ್ದು. ಇದೀಗ ಕಳೆದ ಭಾನುವಾರ ಮತ್ತು ಸೋಮವಾರ ಸುರಿದ ಭಾರೀ ಮಳೆ 1918ರ ದಾಖಲೆಯನ್ನು ಮುರಿದಿದೆ. ಇದರಂತೆ ಕಳೆದ 1 ತಿಂಗಳಿನಿಂದ ಈ ವರೆಗೂ ಚೆನ್ನೈನಲ್ಲಿ 119.73 ಸೆಂ.ಮೀನಷ್ಟು ಮಳೆಯಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ತಮಿಳುನಾಡು ಎಂಇಟಿ ಇಲಾಖೆ, ಚೆನ್ನೈನಲ್ಲಿ ನವೆಂಬರ್ ತಿಂಗಳಿನಲ್ಲಿ ಸುರಿದ ಮಳೆಯನ್ನು ಈಗಾಗಲೇ ದಾಖಲೆ ಮಾಡಿಕೊಳ್ಳಲಾಗಿದ್ದು, ದಾಖಲೆಗಳ ಪ್ರಕಾರ ಈ ಬಾರಿ ಸುರಿದ ಭಾರೀ ಮಳೆ ದಶಕಗಳ ಹಿಂದೆ ಸುರಿದ ಮಳೆಯ ದಾಖಲೆಯನ್ನು ಮುರಿದಿದೆ. ಕಳೆದ ಭಾನುವಾರ ಒಂದೇ ದಿನದಲ್ಲಿ 2.3 ಸೆಂ.ಮೀ ನಷ್ಟು ಮಳೆಯಾಗಿದ್ದು, ಸೋಮವಾರ ಕೂಡ ಈ ಮಳೆ ಮುಂದುವರೆದಿತ್ತು. ಅಂದು 1.9 ಸೆಂ.ಮೀನಷ್ಟು ಮಳೆಯಾಗಿತ್ತು. ಒಟ್ಟಾರೆಯಾಗಿ ಕಳೆದ ತಿಂಗಳು 119.73ಸೆಂ.ಮೀ ರಷ್ಟು ಮಳೆಯಾಗಿದೆ ಎಂದು ಹೇಳಿದೆ.

ತಮಿಳುನಾಡಿನಾದ್ಯಂತ ಕಳೆದ 1 ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ಈಗಾಗಲೇ ತತ್ತರಿಸಿ ಹೋಗಿರುವ ಚೆನ್ನೈನಲ್ಲಿ ಇದೇ ರೀತಿ ಮಳೆ ಸುರಿಯುತ್ತಿದ್ದರೆ ಕರಾವಳಿ ತೀರ ಪ್ರದೇಶಗಳಲ್ಲಿ ಪ್ರವಾಹವುಂಟಾಗುವ ಭೀತಿ ಇದೀಗ ಎಲ್ಲರಲ್ಲೂ ಉಂಟು ಮಾಡಿದೆ. ಭಾರೀ ಮಳೆಗೆ ಈಗಾಗಲೇ 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮುಂಜಾಗ್ರತೆಯ ಕ್ರಮವಾಗಿ ಈಗಾಗಲೇ ಹಲವು ಶಾಲಾ, ಕಾಲೇಜುಗಳಿಗೆ ಮಂಗಳವಾರದವರೆಗೂ ರಜೆ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com