

ಲಖ್ನೌ: ದಾದ್ರಿ ಮತ್ತೊಂದು ಬಾಬರಿ ಮಸೀದಿಯಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಹೇಳಿದ್ದಾರೆ. ದಾದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಜಂ ಖಾನ್ ನ್ಯಾಯಕ್ಕಾಗಿ ವಿಶ್ವ ಸಂಸ್ಥೆಯ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಸಂದರ್ಭದಲ್ಲಿ ನಿರ್ಮಾಣವಾಗಿದ್ದ ಪರಿಸ್ಥಿತಿ ದಾದ್ರಿಯಲ್ಲಿ ನಿರ್ಮಾಣವಾಗಿದೆ, ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿ ಘೋಷಿಸಿದೆ, ಆದರೆ ಬಾರತದಲ್ಲಿರುವ ಮುಸ್ಲಿಮರು ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಮುಸ್ಲಿಮರಿಗೆ ಜಾಗ ಇಲ್ಲ ಎಂದಾದರೆ ಪಾಕಿಸ್ತಾನದ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿರುವ ಅವರು, ಸರ್ಕಾರದ ನೀತಿ ನಿಯಮಗಳ ಪ್ರಕಾರ ಬದುಕಬೇಕಾದರೇ ಮುಸ್ಲಿಮರ ಸ್ಥಿತಿಗತಿ ಹೇಗಿರುತ್ತದೆ ಎಂದು ಪ್ರಶ್ನಿಸಿದ್ದಾರೆ.