ಲಾಲು ಪ್ರಸಾದ್ ಹಿರಿಯ ಮಗನಿಗೆ 25 ವರ್ಷ, ಕಿರಿಯ ಮಗನಿಗೆ 26 ವರ್ಷ

ಬಿಹಾರ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಮಗನಿಗೆ 26 ವರ್ಷ, ಇನ್ನು ಹಿರಿಯ ಮಗನಿಗೆ 25 ವರ್ಷವಂತೆ....
ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್
Updated on

ಪಾಟ್ನಾ: ಬಿಹಾರ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಮಗನಿಗೆ 26 ವರ್ಷ, ಇನ್ನು ಹಿರಿಯ ಮಗನಿಗೆ 25 ವರ್ಷವಂತೆ.
 
ಬಿಹಾರ ಚುನಾವಣಾ ಆಯೋಗ ಇಂತದ್ದೊಂದು ಯಡವಟ್ಟು ಮಾಡಿದೆ. ಬಿಹಾರ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿರುವ ತೇಜ ಪ್ರತಾಪ್ ಮತದಾರರ ಪಟ್ಟಿಯಲ್ಲಿ ನಮೂದಿಸಿರುವಂತೆ ನಾಮಿನೇಷನ್ ಸಲ್ಲಿಸುವಾಗ ತಮಗೆ 25 ವರ್ಷ ವಯಸ್ಸು ಎಂದು ಬರೆದಿದ್ದಾರೆ. ಇನ್ನು ಅವರ ಸಹೋದರ ತೇಜಸ್ವಿಗೆ 26 ವರ್ಷ ಎಂದು ನಮೂದಿಸಲಾಗಿದೆ. ಲಾಲು ಪ್ರಸಾದ್ ಅವರ 9 ಮಕ್ಕಳಲ್ಲಿ ಇದೇ ಮೊದಲ ಬಾರಿಗೆ ತೇಜ ಪ್ರತಾಪ್ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಕಣಕ್ಕಿಳಿದಿದ್ದಾರೆ.

ಇನ್ನು ಬಿಹಾರ ವಿಧಾನ ಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿ ತೇಜ ಪ್ರತಾಪ್ ಆಗಿದ್ದಾರೆ. ಇದೊಂದು ಸಣ್ಣ ತಾಂತ್ರಿಕ ದೋಷವಾಗಿದೆ. ಸದ್ಯ ಚುನಾವಣೆ ಅಧಿಸೂಚನೆ ಜಾರಿಯಲ್ಲಿರುವುದರಿಂದ ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಅಜಯ್ ನಾಯಕ್ ಹೇಳಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com