ಲಖನೌ: ದಾದ್ರಿಯಲ್ಲಿ ನಡೆದ ಹತ್ಯೆಯ ಕುರಿತು ಉತ್ತರಪ್ರದೇಶ ಸರ್ಕಾರವು ಮಂಗಳವಾರ ಕೇಂದ್ರ ಸರ್ಕಾರಕ್ಕೆ ವರದಿ ಒಪ್ಪಿಸಿದೆ.
ಆದರೆ, ಅಚ್ಚರಿಯ ವಿಷಯವೆಂದರೆ, 'ಗೋಮಾಂಸ ತಿಂದದ್ದು ಅಥವಾ ಗೋಹತ್ಯೆ''ಯ ವದಂತಿಯೇ ಮೊಹಮ್ಮದ್ ಇಖ್ಲಾಕ್‍ನ ಸಾವಿಗೆ ಕಾರಣ ಎಂಬ ಯಾವ ವಿಚಾರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ.
'ಪ್ರತಿಬಂಧಿತ ಪ್ರಾಣಿಯ ಮಾಂಸ ಸೇವಿಸಿದ್ದಾರೆ ಎಂಬ ದೃಢೀಕರಿಸದ ಆರೋಪದ ಆಧಾರದಲ್ಲಿ ಇಖ್ಲಾಕ್ ಹಾಗೂ ಅವರ ಪುತ್ರ ಡ್ಯಾನಿಷ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ'' ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ದಾದ್ರಿ ಯಲ್ಲಿ ಬೀಫ್ ತಿಂದಿದ್ದಾರೆಂಬ ಶಂಕೆಯಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳ ಗುಂಪು, ಇಖ್ಲಾಕ್ ರನ್ನು ಹತ್ಯೆಗೈದು, ಪುತ್ರನ ಮೇಲೆ ಹಲ್ಲೆ ನಡೆಸಿತ್ತು.