ಖಾಸಗಿತನವು ಪ್ರಜೆಯ ಮೂಲಭೂತ ಹಕ್ಕೇ ಅಲ್ಲವೇ ಎಂದು ಪರಿಶೀಲಿಸಲು ರಚಿಸಲಾದ ಸಾಂವಿಧಾನಿಕ ಪೀಠವು ತನ್ನ ತೀರ್ಪು ನೀಡುವವರೆಗೆ ಎಲ್‍ಪಿಜಿ ಮತ್ತು ಸಾರ್ವ ಜನಿಕ ವಿತರಣೆಯಲ್ಲಿ ಆಧಾರ್ ಬಳಸ ಬಹುದು ಎಂದಿದೆ. ವಿತ್ತೀಯ, ಟೆಲಿಕಾಂ ಮತ್ತು ಸ್ಟಾಕ್ ಮಾರ್ಕೆಟ್ ವಹಿವಾಟುಗಳಲ್ಲಿ ಆಧಾರ್ ಅನ್ನು ಗುರುತು ಪತ್ರವಾಗಿಬಳಸುವುದನ್ನುಕಡ್ಡಾಯಗೊಳಿಸಲು ಅನುಕೂಲ ಮಾಡಿ ಕೊಡುವಂತೆ ಕೋರಿ ರಿಸರ್ವ್ ಬ್ಯಾಂಕ್, ಸೆಬಿ, ಐಆರ್‍ಡಿಎ ಮುಂತಾದ ವಿತ್ತೀಯ ಸಂಸ್ಥೆಗಳು ಕೋರ್ಟ್‍ಗೆ ಹೋಗಿದ್ದವು.