ಬಿಹಾರ ಗದ್ದುಗೆ ಯಾರಿಗೆ?

ಬಿಹಾರ ವಿಧಾನಸಭೆಗೆ ಪ್ರಚಾರ ಕಳೆಗಟ್ಟಿರುವಂತೆಯೇ ಗುರುವಾರ ಎರಡು ಪ್ರಮುಖ ಸಮೀಕ್ಷೆಗಳು ಪ್ರಕಟವಾಗಿವೆ. ಎರಡರಲ್ಲಿಯೂ...ಕೂಡ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಬಿಹಾರ ವಿಧಾನಸಭೆಗೆ ಪ್ರಚಾರ ಕಳೆಗಟ್ಟಿರುವಂತೆಯೇ ಗುರುವಾರ ಎರಡು ಪ್ರಮುಖ ಸಮೀಕ್ಷೆಗಳು ಪ್ರಕಟವಾಗಿವೆ. ಎರಡರಲ್ಲಿಯೂ ಕೂಡ ಒಂದೊಂದು ರೀತಿಯ ಫಲಿತಾಂಶ ಪ್ರಕಟವಾಗಿವೆ.

ಸಿಎನ್‍ಎನ್-ಐಬಿಎನ್ ಮತ್ತು ಆರ್್ಯಕ್ಸಿಸ್ ಮೈ ಇಂಡಿಯಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಜೆಡಿಯು-ಕಾಂಗ್ರೆಸ್-ಆರ್‍ಜೆಡಿ ಮೈತ್ರಿಕೂಟಕ್ಕೆ  129-145 ಸ್ಥಾನಗಳು ಲಭಿಸಲಿವೆ ಎಂದು ತಿಳಿಸಿದೆ. ಬಿಜೆಪಿ ನೇತೃತ್ವದ ಎನ್‍ಡಿಎಗೆ 87-103 ಸ್ಥಾನಗಳು ಪ್ರಾಪ್ತಿಯಾಗಲಿವೆ. ಇತರರು 11 ಕ್ಷೇತ್ರಗಳಲ್ಲಿ ಗೆಲವು ಸಾ„ಸಲಿದ್ದಾರೆ. ಈ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರೇ ಫೇವರೆಟ್ ಆಗಿದ್ದಾರೆ.

ಮತ್ತೊಂದೆಡೆ ಇಂಡಿಯಾ ಟಿವಿ- ಸಿವೋಟರ್ ಸಮೀಕ್ಷೆ ಪ್ರಕಾರ ಎನ್‍ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗದೇ ಹೋದರೂ ಬಹುಮತದ ಸನಿಹ ಬಂದು ನಿಲ್ಲಲಿದೆ. ಅಂದರೆ ಬಹುಮತಕ್ಕೆ ಬಿಜೆಪಿಗೆ ಮೂರು ಸ್ಥಾನಗಳ ಕೊರತೆಯಾಗಲಿದೆ.ಆರ್‍ಜೆಡಿ, ಜೆಡಿಯು ಮತ್ತು  ಗ್ರೆಸ್ ಮಹಾ ಮೈತ್ರಿಕೂಟ 116 ಸ್ಥಾನಗಳನ್ನು ಗೆಲ್ಲಲಿವೆ.ಇತರರು 8 ಸ್ಥಾನಗಳಿಗೆ ಸೀಮಿತವಾಗಲಿದ್ದಾರೆ.ಹಾಗಾಗಿ ಸರ್ಕಾರ ರಚನೆಯಲ್ಲಿ ಪಕ್ಷೇತರರು ಮಹತ್ವದ ಪಾತ್ರವಹಿಸಲಿದ್ದಾರೆ.

ಇ.ಸಿ.ಪರಿಶೀಲನೆ: ಪ್ರಧಾನಿ ಮೋದಿ ಅವರು ಬಿಹಾರ ರ್ಯಾಲಿಯಲ್ಲಿ ಮಾಡಿದ ಭಾಷಣವನ್ನು ಚುನಾವಣಾ ಆಯೋಗ(ಇಸಿ) ಪರಿಶೀಲನೆ ನಡೆಸಲಿದೆ.

ಚುನಾವಣೆಗೂ ಪಿಎಂ ಕೋಮು ಬಣ್ಣ: ನಿತೀಶ್
``ಮೋದಿಯ ನೈಜ ಮುಖ ಬಯಲಾಗಿದೆ. ಅಸೆಂಬ್ಲಿ ಚುನಾವಣೆಗೂ ಕೋಮುಬಣ್ಣ ಹಚ್ಚಲು ಅವರು ಯತ್ನಿಸುತ್ತಿದ್ದಾರೆ ಎಂದು ಬಿಹಾರ ಸಿಎಂ ನಿತೀಶ್  ಕುಮಾರ್ ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ವಾಜಪೇಯಿ ಅವರು ಮೋದಿಗೆ ರಾಜಧರ್ಮ ಪಾಲಿಸುವಂತೆ ನೆನಪಿಸಿದ್ದು. ಆದರೆ, ಈಗ ವಾಜಪೇಯಿ ಅವರು ಮಾಡಿದ ಕೆಲಸವನ್ನು ಯಾರು ಮಾಡಬೇಕು ಎಂದು ಟ್ವಿಟರ್ ಮೂಲಕ ನಿತೀಶ್ ಪ್ರಶ್ನಿಸಿದ್ದಾರೆ.

ಲಾಲು ದೇಹದಲ್ಲಿ ಶೈತಾನ:
ಬೇಗುಸರಾ ರ್ಯಾಲಿಯಲ್ಲಿ, `ಹಿಂದೂಗಳು ಬೀಫ್ ತಿನ್ನುತ್ತಾರೆ' ಎಂಬ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಮೋದಿ, ``ಇದು ಲಾಲು ಅವರು ಯದುವಂಶೀಯರಿಗೆ ಮಾಡಿದ ಅವಮಾನ'' ಎಂದಿದ್ದರು. ``ಲಾಲು ದೇಹದೊಳಗೆ ಶೈತಾನ ನುಗ್ಗಿದೆ. ಅದರ ಪ್ರಭಾವದಲ್ಲಿ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ.

ಪಿಶಾಚಿಗೆ ಪ್ರವೇಶಿಸಲು ಲಾಲು ದೇಹವೇ ಬೇಕಿತ್ತಾ? ಶೈತಾನನಿಗೆ ಲಾಲು ವಿಳಾಸ ಹೇಗೆ ಗೊತ್ತಾಯ್ತು'' ಎಂದು ಪ್ರಶ್ನಿಸಿದ ಮೋದಿ,`ಲಾಲು ಕೂಡ ತನ್ನ ಸಂಬಂಧಿಕರನ್ನು ಆಹ್ವಾನಿಸಿದಂತೆ ಶೈತಾನನನ್ನು ಸ್ವಾಗತಿಸಿದ್ದಾರೆ' ಎಂದು ವ್ಯಂಗ್ಯವಾಡಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಲಾಲು,ನನ್ನೊಳಗೆ ಶೈತಾನನಿದ್ದಾನೆ ಎನ್ನುವುದನ್ನು ಸಾಬೀತು ಮಾಡಿ ಇಲ್ಲವೇ ಬಿಹಾರ ಜನತೆಯ ಕ್ಷಮೆ ಕೇಳಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com