

ನವದೆಹಲಿ: ಬಿಹಾರ ವಿಧಾನ ಸಭೆ ಚುನಾವಣೆಯ ಮೊದಲ ಹಂತದ ಮತದಾನದ ಪ್ರಚಾರ ಇಂದು ಅಂತ್ಯವಾಗಿದೆ.
ಮೊದಲ ಹಂತದಲ್ಲಿ 49 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸೋಮವಾರ ಮತದಾನ ನಡೆಯಲಿದ್ದು ಇಂದು ಅಂತಿಮ ಹಂತದ ಪ್ರಚಾರಕ್ಕೆ ತೆರೆ ಬೀಳಲಿದೆ.
54 ಮಹಿಳೆಯರು ಸೇರಿದಂತೆ ಒಟ್ಟು 583 ಅಭ್ಯರ್ಥಿಗಳು 49 ವಿಧಾನ ಸಭೆ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷಿಸಿಲು ಕಣಕ್ಕಿಳಿದಿದ್ದಾರೆ.
ಮೊದಲ ಹಂತದಲ್ಲಿ ಸಮಸ್ತಿಪುರ್, ಬೇಗುಸರಾಯ್, ಖಗಾರಿಯಾ, ಬಾಂಕಾ, ಮುಂಗರ್, ಲಾಖೀಸರಾಯ್, ಶೇಖಿಪುರ್ ನವಾಡ ಮತ್ತು ಜಮೈ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಇನ್ನು ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.