ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಕ್ಲೀನ್ ಸ್ವೀಪ್

ಪಶ್ಚಿಮ ಬಂಗಾಳದ 3 ಕಡೆ ನಡೆದ ಪೌರ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ಕ್ಲೀನ್‍ಸ್ವೀಪ್ ಮಾಡಿದೆ. ಬಿಧಾನ್‍ನಗರ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೋಲ್ಕತಾ: ಪಶ್ಚಿಮ ಬಂಗಾಳದ 3 ಕಡೆ ನಡೆದ ಪೌರ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ಕ್ಲೀನ್‍ಸ್ವೀಪ್ ಮಾಡಿದೆ. ಬಿಧಾನ್‍ನಗರ್ ರಾಜರ್ಹತ್ ನಗರ ಪಾಲಿಕೆ, ಅಸನ್‍ಸೋಲ್ ನಗರಪಾಲಿಕೆ ಹಾಗೂ ಬಾಲಿ ಹೌರಾ ಪಾಲಿಕೆಗಳನ್ನು ಗೆದ್ದುಕೊಂಡಿದೆ. 

3ರಂದು ಮತದಾನ ನಡೆದಿತ್ತು. ಫಲಿತಾಂಶ ಶನಿವಾರ ಪ್ರಕಟವಾಗಿದೆ. ಬಿಧಾನ್‍ನಗರದ 41 ರಲ್ಲಿ 37, ಅಸನ್‍ಸೋಲ್‍ನ 106ರಲ್ಲಿ 75, ಬಾಲಿಯ 16ರಲ್ಲಿ ಅಷ್ಟೂ ಸ್ಥಾನಗಳನ್ನು ತೃಣಮೂಲ ಕಾಂಗ್ರೆಸ್ ಗೆದ್ದುಕೊಂಡಿದೆ. 
ನಗರ ಪ್ರದೇಶಗಳ ಮೇಲೆ ತೃಣಮೂಲ ಭದ್ರ ಹಿಡಿತ ಹೊಂದಿರುವುದನ್ನು ಈ ಫಲಿತಾಂಶ ಸ್ಪಷ್ಟಪಡಿಸಿದೆ. ಆದರೆ ಮತದಾನದ ವೇಳೆ ಟಿಎಂಸಿ ವ್ಯಾಪಕ ನಕಲಿ ಮತದಾನ, ಗೂಂಡಾಗಿರಿಯಲ್ಲಿ ತೊಡಗಿದ ಬಗ್ಗೆ ದೂರುಗಳಿವೆ. 2016ರಲ್ಲಿ ವಿಧಾ ನಸಭೆ ಚುನಾವಣೆಗಳು ನಡೆಯಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com