ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ: ಸಿಎಂ ಖಟ್ಟರ್

ಗೋಮಾಂಸ ಸೇವನೆ ತ್ಯಜಿಸಿದರೆ ಮುಸ್ಲಿಮರು ಭಾರತದಲ್ಲಿ ಬಾಳಬಹುದು ಎಂಬ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ...
ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ (ಸಂಗ್ರಹ ಚಿತ್ರ)
ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ (ಸಂಗ್ರಹ ಚಿತ್ರ)
Updated on: 

ಚಂಡೀಗಢ: ಗೋಮಾಂಸ ಸೇವನೆ ತ್ಯಜಿಸಿದರೆ ಮುಸ್ಲಿಮರು ಭಾರತದಲ್ಲಿ ಬಾಳಬಹುದು ಎಂಬ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ ಶುಕ್ರವಾರ ವಿಷಾದ ವ್ಯಕ್ತಪಡಿಸಿರುವ ಅವರು ಯಾರಿಗೂ ನೋವು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಹೇಳಿದ್ದಾರೆ.

ಖಟ್ಟರ್ ಅವರ ಹೇಳಿಕೆಗೆ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ಅವರು, ಪ್ರತಿಯೊಂದು ಸಮುದಾಯದ ನಂಬಿಕೆ, ಸಂಸ್ಕೃತಿಯನ್ನು ನಾವು ಗೌರವಿಸುತ್ತೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಅಕ್ಟೋಬರ್ 26ಕ್ಕೆ ಒಂದು ವರ್ಷ ಪೂರೈಸಲಿರುವ ಖಟ್ಟರ್ ಖಾಸಗಿ ದಿನಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಗೋಮಾಂಸ ತ್ಯಜಿಸಿದರೆ ಮುಸ್ಲಿಮರು ಭಾರತದಲ್ಲಿ ನೆಲೆಸಬಹುದು. ದಾದ್ರಿ ಪ್ರಕರಣ ಸಂಬಂಧ ದೇಶದಲ್ಲಿ ತಪ್ಪು ಕಲ್ಪನೆಗಳು ಸೃಷ್ಟಿಯಾಗುತ್ತಿವೆ. ದಾದ್ರಿ ಪ್ರಕರಣ ನಡೆದಿದ್ದು ಎರಡು ಸಮುದಾಯಗಳ ನಡುವೆ ತಪ್ಪು ತಿಳುವಳಿಕೆಯುಂಟಾದ್ದರಿಂದ. ಈ ರೀತಿಯ ಘಟನೆ ನಡೆಯಬಾರದಿತ್ತು.

ಗೋ ಹತ್ಯೆ ಎಂಬುದು ಇಲ್ಲಿನ ಜನರ ಮನಸ್ಸಿಗೆ ಸಾಕಷ್ಟು ನೋವನ್ನುಂಟು ಮಾಡುತ್ತದೆ. ಹಾಗೆಂದು ಅಖ್ಲಾಕ್ ಕೊಂದಿದ್ದು ಸರಿಯೆಂದು ಅಲ್ಲ. ಒಬ್ಬ ಮನುಷ್ಯನ ಮೇಲೆ ದಾಳಿ ಮಾಡುವುದು. ಆತನನ್ನು ಹತ್ಯೆ ಮಾಡುವುದೂ ತಪ್ಪು. ದಾದ್ರಿ ಪ್ರಕರಣ ನಡೆಯಲು ಪ್ರಮುಖರಾದ ಆರೋಪಿಗಳಿಗೆ ಶೀಘ್ರದಲ್ಲೇ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com