ಐಪಿಎಲ್ ಕೇಸು: ಲಲಿತ್ ಮೋದಿಗೆ ನೊಟೀಸ್ ನೀಡಲು ಜಾರಿ ನಿರ್ದೇಶನಾಲಯ ಸಿದ್ಧತೆ

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತು ಅವರ ಸಹಚರರ ವಿರುದ್ಧ ಕೇಳಿಬರುತ್ತಿರುವ ಸುಮಾರು 12 ಹಣಕಾಸು ಅಕ್ರಮಗಳಿಗೆ...
ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ
ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ

ನವದೆಹಲಿ: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತು ಅವರ ಸಹಚರರ ವಿರುದ್ಧ ಕೇಳಿಬರುತ್ತಿರುವ ಸುಮಾರು 12 ಹಣಕಾಸು ಅಕ್ರಮಗಳಿಗೆ ಸಂಬಂಧಪಟ್ಟಂತೆ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪಗಳಡಿ ಅಂತಿಮ ದಂಡ ನೊಟೀಸ್ ಕಳುಹಿಸಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸುತ್ತಿದೆ.

ಮೋದಿ ವಿರುದ್ಧ ರೆಡ್ ಕಾರ್ನರ್ ನೊಟೀಸ್ ನೀಡುವ ಅಧಿಕೃತ ಅಧಿಸೂಚನೆಗೆ ನಿರ್ದೇಶನಾಲಯ ಕಾಯುತ್ತಿದ್ದು, ಅವರನ್ನು ವಿಚಾರಣೆಗೆ ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಗೃಹ ಮತ್ತು ವಿದೇಶಾಂಗ ಸಚಿವಾಲಯದ ಬಳಿ ಮನವಿ ಮಾಡಲಿದೆ.

ಲಲಿತ್ ಮೋದಿ ಮತ್ತು ಅವರ ಆಪ್ತರ ವಿರುದ್ಧ ಸುಮಾರು 12 ಕೇಸುಗಳಿಗೆ ಸಂಬಂಧಪಟ್ಟಂತೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯಡಿ ಶೋಕಾಸ್ ನೊಟೀಸನ್ನು ಸದ್ಯದಲ್ಲಿಯೇ ಕಳುಹಿಸಲಿದೆ. ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಣವನ್ನು ದುರುಪಯೋಗಪಡಿಸಿದ ಆರೋಪ ಲಲಿತ್ ಮೋದಿ ವಿರುದ್ಧ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com