

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗಾಗಿ ಸ್ಟಾರ್ ಇಂಡಿಯಾ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರು ಮತ್ತೆ ಹಾಜರಾಗಿದ್ದಾರೆ.
ಇಂದು ಬೆಳಿಗ್ಗೆ ಮುಂಬೈ ಪೊಲೀಸ್ ಠಾಣೆಗೆ ಪೀಟರ್ ಮುಖರ್ಜಿ ಹಾಜರಾಗಿದ್ದು, ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿನ್ನೆಯಷ್ಟೇ ಪೊಲೀಸರು ಸತತ 12 ಗಂಟೆಗಳ ಕಾಲ ಪೀಟರ್ ಮುಖರ್ಜಿ ಅವರನ್ನು ವಿಚಾರಣೆಗೊಳಪಡಿಸಿದ್ದರು. ಇದರ ಬೆನ್ನಲ್ಲೇ, ಇಂದು ಮತ್ತೊಮ್ಮೆ ಪೀಟರ್ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.
ಶೀನಾ ಹತ್ಯೆಯಾದಾಗ ಪೀಟರ್ ಮುಖರ್ಜಿ ಅವರು ಲಂಡನ್ ನಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.