ಕಾರೊಳಗೆ ಸಿಕ್ಕಿ ಹಾಕಿಕೊಂಡು ಇಬ್ಬರು ಮಕ್ಕಳು ಸಾವು

ಆಟವಾಡುತ್ತಿದ್ದಾಗ ಕಾರಿನ ಬಾಗಿಲನ್ನು ಹಾಕಿಕೊಂಡ ಇಬ್ಬರು ಮಕ್ಕಳು ನಂತರ ಬಾಗಿಲು ತೆಗೆಯಲು ಬಾರದೇ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಗುರ್‌ಗಾಂವ್ ನ ಕದರ್ಪುರ ಪ್ರದೇಶದಲ್ಲಿ ಗುರುವಾರ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಗುರ್‌ಗಾಂವ್: ಆಟವಾಡುತ್ತಿದ್ದಾಗ ಕಾರಿನ ಬಾಗಿಲನ್ನು ಹಾಕಿಕೊಂಡ ಇಬ್ಬರು ಮಕ್ಕಳು ನಂತರ ಬಾಗಿಲು ತೆಗೆಯಲು ಬಾರದೇ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಗುರ್‌ಗಾಂವ್ ನ ಕದರ್ಪುರ ಪ್ರದೇಶದಲ್ಲಿ ಗುರುವಾರ ನಡೆದಿದೆ.

ಸಾವನ್ನಪ್ಪಿದ ಇಬ್ಬರು ಹೆಣ್ಣು ಮಕ್ಕಳು 2 ಮತ್ತು 4 ವರ್ಷದ ಮಕ್ಕಳಾಗಿದ್ದು ಇಂದು ಬೆಳಗ್ಗೆ ಆಟವಾಡುತ್ತಾ ಕಾರಿನೊಳಗೆ ಹೋಗಿದ್ದಾರೆ. ನಂತರ ಕಾರಿನ ಬಾಗಿಲನ್ನು ಹಾಕಿದ ತಕ್ಷಣ ಅದು ಇಂಟರ್ ಲಾಕ್ ಆಗಿದೆ. ಡೋರ್ ಲಾಕ್ ಆದ ನಂತರ ಮಕ್ಕಳು ಆಟದಲ್ಲಿ ನಿರತರಾಗಿದ್ದಾರೆ. ಕೆಲವು ನಿಮಿಷಗಳ ಬಳಿಕ ಕಾರಿನ ಬಾಗಿಲು ತೆಗೆಯಲು ಬಾರದ ಮಕ್ಕಳು ಕಾರಿನೊಳಗೆ ಚೀರಾಡಿದರಾದರೂ ಮಕ್ಕಳು ಕಾರಿನೊಳಗಿರುವುದು ಯಾರ ಗಮನಕ್ಕೂ ಬಂದಿಲ್ಲ. ಕಾರಿನೊಳಗೆ ಉಸಿರಾಟದ ಸಮಸ್ಯೆಯುಂಟಾದ ಕಾರಣ ಪುಟ್ಟ ಮಕ್ಕಳು ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಗುರ್‌ಗಾಂವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ ನಿರೀಕ್ಷಿಸಲಾಗಿದೆ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com