ತಪಾಸಣೆ ರಹಿತ ಪ್ರಯಾಣಿಕರ ಪಟ್ಟಿಯಿಂದ ರಾಬರ್ಟ್ ವಾದ್ರಾ ಹೆಸರು ಬಿಟ್ಟಿಲ್ಲ: ವಿಮಾನಯಾನ ಸಚಿವಾಲಯ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾಗೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ವಿನಾಯಿತಿ ಸೌಲಭ್ಯ ತೆರವು ಸಂಬಂಧ ಉಂಟಾಗಿರುವ ....
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
Updated on: 

ದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾಗೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ವಿನಾಯಿತಿ ಸೌಲಭ್ಯ ತೆರವು ಸಂಬಂಧ ಉಂಟಾಗಿರುವ ಗೊಂದಲ ಇನ್ನೂ ನಿವಾರಣೆಯಾಗಿಲ್ಲ 'ತಪಾಸಣೆ ರಹಿತ ಪ್ರಯಾಣಿಕ'ರ ಪಟ್ಟಿಯಲ್ಲಿ ರಾಬರ್ಟ್ ವಾದ್ರಾ ಹೆಸರು ತೆಗೆಯುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳದಿರುವುದರಿಂದ ವಿಮಾನಯಾನ ಸಚಿವಾಲಯ ರಾಬರ್ಟ್ ವಾದ್ರಾ ಹೆಸರನ್ನು ಕೈ ಬಿಟ್ಟಿಲ್ಲ.

ರಾಬರ್ಟ್ ವಾದ್ರಾ  ಅವರು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ವಿನಾಯಿತಿ ಸೌಲಭ್ಯವನ್ನು ಇನ್ನೂ ಕೆಲ ಕಾಲ ಅನುಭವಿಸಲಿದ್ದಾರೆ. ತಪಾಸಣೆ ರಹಿತ ಪ್ರಯಾಣಿಕ'ರ ಪಟ್ಟಿಯಲ್ಲಿ ರಾಬರ್ಟ್ ವಾದ್ರಾ ಹೆಸರು ತೆಗೆಯುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ವಿಮಾನಯಾನ ಸಚಿವಾಲಯ ಸೂಕ್ತ ನಿರ್ಧಾರ ಹೊರಬಾರದ ಕಾರಣ ಕಾರ್ಯಾಚರಣೆ ಮಾಡಲು ಇನ್ನೂ ಕೆಲ ಕಾಲ ಕಾಯಬೇಕಿದೆ.

ರಾಬರ್ಟ್ ವಾದ್ರಾ, ಅವರಿಗೆ ಅಷ್ಟೊಂದು ಭದ್ರತೆಯ ಅಪಾಯವಿಲ್ಲವಾಗಿರುವುದರಿಂದ ಇನ್ನು ಮುಂದೆ ಎಲ್ಲರಂತೆಯೇ ವಿಮಾನಗಳಲ್ಲಿ ಪ್ರಯಾಣಿಸುವ ಸಾಮಾನ್ಯ ತಪಾಸಣೆಗಳನ್ನು ಎದುರಿಸಬಹುದು ಎಂದು ನಿರ್ಧಾರಕ್ಕೆ ಬಂದಿದ್ದ ವಿಮಾನಯಾನ ಸಚಿವಾಲಯ, ತಪಾಸಣೆ ರಹಿತ ಪ್ರಯಾಣದ ಫಲಾನುಭವಿಗಳಾದ 33 ಮಂದಿ ವಿಐಪಿಗಳ ಹೆಸರನ್ನು ಹಿಂಪಡೆಯುವ ಬಗ್ಗೆ ಪ್ರಕ್ರಿಯೆ ಆರಂಭಿಸಲು ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಆದರೆ ರಾಬರ್ಟ್ ವಾದ್ರಾ ಅವರ ಪತ್ನಿ, ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿಗೆ ಮಾತ್ರ ಈ ಸೌಲಭ್ಯ ಮುಂದುವರಿಸುವುದಾಗಿ ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com