ಹೆಣ್ಣು ಭ್ರೂಣ ಗಂಡಾಗಿಸಲು ಮುಗಿಬಿದ್ದ ಜನಜಂಗುಳಿ

ಯೋಗ ಗುರು ಬಾಬಾ ರಾಮ್ ದೇವ್ ಅವರ ಪುತ್ರಜೀವಕ್ ಬೀಜ ಸೃಷ್ಟಿಸಿದ ವಿವಾದದ ಬೆನ್ನಲ್ಲೇ ಇದೀಗ ಇದೇ ಮಾದರಿಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಹರ್ಯಾಣ: ಯೋಗ ಗುರು ಬಾಬಾ ರಾಮ್ ದೇವ್ ಅವರ ಪುತ್ರಜೀವಕ್ ಬೀಜ ಸೃಷ್ಟಿಸಿದ ವಿವಾದದ ಬೆನ್ನಲ್ಲೇ ಇದೀಗ ಇದೇ ಮಾದರಿಯ ಇನ್ನೆರಡು ಔಷಧಗಳು ಸಂಚಲನ ಎಬ್ಬಿಸಿವೆ. ಪುತ್ರಜೀವಕ್ ಬೀಜಗಳು ಗಂಡು ಮಗು ಪಡೆಯಲು ಸಹಾಯ ಮಾಡುತ್ತವೆಂಬ ಗುಲ್ಲೆದ್ದಿತ್ತು.

ಆದರೆ ಈ ಔಷಧಗಳು ತಾಯಿ ಒಡಲಿನ ಹೆಣ್ಣು ಭ್ರೂಣವನ್ನೇ ಗಂಡು ಮಗುವಿನ ಭ್ರೂಣವಾಗಿ ಬದಲಿಸುತ್ತದೆ ಎಂಬ ಜಾಹೀರಾತಿನೊಂದಿಗೆ ಭಾರಿ ಸಂಖ್ಯೆಯ ಜನರನ್ನು ಮರುಳು ಮಾಡಿವೆ. ವಿಶೇಷವಾಗಿ ಹರ್ಯಾಣದಲ್ಲಿ ಭ್ರೂಣದ ಲಿಂಗ ಬದಲಿಸುವ(!?) ಎರಡು ಔಷಧಗಳು ಸಿಕ್ಕಾಪಟ್ಟೆ ಮಾರಾಟವಾಗುತ್ತಿವೆ. ಆದರೆ ಇದು ಕಾನೂನು ಬಾಹಿರ ಮಾರಾಟ. ಈ ಔಷಧಗಳು ಸರ್ಕಾರದಿಂದಾಗಲೀ ಯಾವುದೇ ವೈದ್ಯಕೀಯ ಹಾಗೂ ಗುಣಮಟ್ಟ ಮಾಪನ ಸಂಸ್ಥೆಯಿಂದಾಗಲೀ ಅನುಮೋ ದಿಸಲ್ಪಟ್ಟಿಲ್ಲ. ಮೋದಿ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಆಂದೋಲನ ನಡೆಸಿ ಹೆಣ್ಣು ಸಂತಾನದ ವೃದ್ಧಿಗೆ ಪ್ರಯತ್ನಿಸುತ್ತಿರುವಾಗಲೇ ಇಂಥ ವಿಚಾರಗಳು ಜನಪ್ರಿಯಗೊಳ್ಳುತ್ತಿವೆ.
ಶಿವಲಿಂಗಿ ಮತ್ತು ಮಾಜುಫಲ: ಟೆಸ್ಟೋಸ್ಟೆರಾನ್ ಹೊಂದಿರುವ ಶಿವಲಿಂಗಿ ಎಂಬ ಔಷಧ ಹಾಗೂ ಮಾಜುಫಲ ಎಂಬ ಮತ್ತೊಂದು ಔಷಧಗಳಲ್ಲಿ ನೈಸರ್ಗಿಕ ಸ್ಟೆರಾಯ್ಡ್ ಇದ್ದು, ಹೆಚ್ಚಾಗಿ ಹೆಣ್ಣುಭ್ರೂಣದ ಪರಿವರ್ತನೆಗಾಗಿಯೇಬಳಸಲಾಗುತ್ತಿ ದೆಯಂತೆ. ಇದು ತಾಯಿ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಭ್ರೂಣದ ಮೇಲೆ ತೀವ್ರ ಪರಿಣಾಮ ಬೀರುವುದು ನಿಶ್ಚಿತವೆಂದು ಈ ಔಷಧದ ದುಷ್ಪರಿಣಾಮದ ಬಗ್ಗೆ ವೈದ್ಯರು ಎಚ್ಚರಿಸಿದರೂ ಜನ ಅದಕ್ಕಾಗಿ ಮುಗಿಬೀಳುತ್ತಿದ್ದಾರೆ. ಸುಳ್ಳು ಅಂಕಿ ಅಂಶಗಳನ್ನು ನೀಡಿ ಈ ಔಷಧಗಳಿಂದ ಭ್ರೂಣಗಳ ಲಿಂಗ ಪರಿವರ್ತನೆಯಾಗಿದೆ ಎಂದು ನಂಬಿಸುತ್ತಿರುವ ಮಾರಾಟಗಾರರು ಜನಸಾಮಾನ್ಯರ ದಿಕ್ಕುತಪ್ಪಿಸುತ್ತಿದ್ದಾರೆ. ಬೇಟಿ ಬಚಾವೊ ಬೇಟಿ ಪಡಾವೋ ಆಂದೋಲನದ ಮುಂದಾಳತ್ವ ವಹಿಸಿರುವ ಡಾ.ಜಿ.ಎಸ್.ಸಿಂಘಾಲï ಈ ಔಷಧ ಮಾರಾಟ ಪ್ರಕರಣದ ಬೆನ್ನು ಹತ್ತಿದ್ದು, ಈಗಾಗಲೇ ಅಂಬಾಲಾದ ಕುಖ್ಯಾತ ಕೇಂದ್ರವನ್ನು ಪತ್ತೆ ಮಾಡಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ಏಪ್ರಿಲ್ ಮತ್ತು ಜೂನ್ ನಡುವೆ 5,58,713 ಮಕ್ಕಳ ಜನನವಾಗಿದ್ದು, 12 ಸಾವಿರಕ್ಕೂ ಹೆಚ್ಚು ಭ್ರೂಣ ಹತ್ಯೆಗಳು ಸಂಭವಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com