ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಗೆ ಭಾರತ ರತ್ನ ನೀಡಲು ಶಿವಸೇನೆ ಒತ್ತಾಯ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಶಿವಸೇನೆ
ವೀರ್ ಸಾವರ್ಕರ್ ಮತ್ತು ನರೇಂದ್ರ ಮೋದಿ
ವೀರ್ ಸಾವರ್ಕರ್ ಮತ್ತು ನರೇಂದ್ರ ಮೋದಿ
Updated on: 

ನವದೆಹಲಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು ಹಿಂದೂ ರಾಷ್ಟ್ರಕ್ಕಾಗಿ  ವೀರ ಸಾವರ್ಕರ್ ಅವರ ಹೋರಾಟದ ಬಗ್ಗೆ ವರ್ಣಿಸಿದ್ದಾರೆ. ವೀರ್ ಸಾವರ್ಕರ್ ಗೆ ಭಾರತ ರತ್ನ ಗೌರವ ನೀಡುವುದರ ಬಗ್ಗೆ ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದವು ಎಂದು ಅವರು ಆರೋಪಿಸಿದ್ದಾರೆ.

ಬ್ರಿಟಿಷ್ ಕೋರ್ಟ್ ವೀರ್ ಸರ್ಕಾರ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿ ಅಂಡಮಾನ್ ದ್ವೀಪದ ಜೈಲಿನಲ್ಲಿಟ್ಟಿತ್ತು. ಅಲ್ಲಿ ಅವರಿಗೆ ಕ್ರೂರ ರೀತಿಯಲ್ಲಿ ಹಿಂಸಿಸಿ, ಕಿರುಕುಳ ನೀಡಿದ್ದರು. ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ  ವೀರ್ ಸಾವರ್ಕರ್ ಅವರ ಕೊಡುಗೆ ಅಪೂರ್ವವಾಗಿದ್ದು. ಹಿಂದಿನ ಸರ್ಕಾರಗಳು ಉದ್ದೇಶಪೂರ್ವಕವಾಗಿ ಭಾರತ ರತ್ನ ನೀಡಲು ನಿರ್ಲಕ್ಷ್ಯ ವಹಿಸಿದ್ದವು ಎಂದು ಅವರು ದೂರಿದ್ದಾರೆ. ಹೀಗಾಗಿ ದೇಶದ ಜನತೆಯ ಅಪೇಕ್ಷೆಯಂತೆ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು  ಮೋದಿ ಸರ್ಕಾರ ಮನಸ್ಸು ಮಾಡುತ್ತದೆಂಬ ನಂಬಿಕೆ ಇರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com