ಭೋಪಾಲ್ ನಲ್ಲಿ ನಿರ್ಭಯಾ ಪ್ರಕರಣದ ಮಾದರಿ ಗ್ಯಾಂಗ್ ರೇಪ್

ದೆಹಲಿ ನಿರ್ಭಯಾ ಪ್ರಕರಣವನ್ನೇ ನೆನಪಿಸುವ ರೀತಿಯಲ್ಲಿ ಭೋಪಾಲ್ ನಲ್ಲಿ ಗ್ಯಾಂಗ್ ರೇಪ್ ಪ್ರಕರಣವೊಂದು ನಡೆದಿದೆ.
ಭೋಪಾಲ್ ನಲ್ಲಿ ನಿರ್ಭಯಾ ಪ್ರಕರಣದ ಮಾದರಿ ಗ್ಯಾಂಗ್ ರೇಪ್

ಭೋಪಾಲ್: ದೆಹಲಿ ನಿರ್ಭಯಾ ಪ್ರಕರಣವನ್ನೇ ನೆನಪಿಸುವ ರೀತಿಯಲ್ಲಿ ಭೋಪಾಲ್ ನಲ್ಲಿ ಗ್ಯಾಂಗ್ ರೇಪ್ ಪ್ರಕರಣವೊಂದು ನಡೆದಿದೆ.
ಚಲನೆಯಲ್ಲಿದ್ದ ಬಸ್ ನಲ್ಲಿ  ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ. ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಬಸ್ ಚಾಲಕ ಹಾಗೂ ಇನ್ನಿಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಭೋಪಾಲ್ ನ ಎಸ್.ಪಿ ಹೇಳಿದ್ದಾರೆ. ಸೆ.17 ರಂದು ರಾತ್ರಿ 11 ಗಂಟೆ ವೇಳೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಪಂಡಿತ್ ಎಂಬ ವ್ಯಕ್ತಿ ಅತ್ಯಾಚಾರ ನಡೆಸಿದ್ದಾನೆ. ಈ ಘಟನೆ ವೇಳೆ ಪ್ರಕರಣದ ಮುಖ್ಯ ಆರೋಪಿ ಬಸ್ ಚಾಲಕ ಹಾಗೂ ಮತ್ತೋರ್ವ ಆರೋಪಿ ಶಾಮೀಲಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಚಾಲಕನನ್ನು ಸಲ್ಮಾನ್ ಎಂದು ಗುರುತಿಸಲಾಗಿದೆ. ದಕ್ಷಿಣ ಭೋಪಾಲ್ ನ ಪುಲ್ ಬೋಗ್ಡಾ ಬಳಿ ಬಸ್ ಮಹಿಳೆ ಇಳಿದುಕೊಳ್ಳಬೇಕಿತ್ತು. ಆದರೆ ಅಲ್ಲಿ ನಿಲ್ಲಿಸದೇ ಮೈದಾ ಮಿಲ್ ಬಳಿ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಂತರ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ ದೂರು ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆದಿದೆ.
2012 ರ ಡಿಸೆಂಬರ್ ನಲ್ಲಿ ದೆಹಲಿಯಲ್ಲಿ ಇಂಥದ್ದೇ ಘಟನೆ ನಡೆದಿತ್ತು ಚಲನೆಯಲ್ಲಿದ್ದ ಬಸ್ ನಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com