ನೋಟಾಗೂ ಸಿಕ್ಕಿತೊಂದು ಚಿಹ್ನೆ

ನೋಟಾ ಆಯ್ಕೆಗೂ ಈಗ ಹೊಸ ಚಿಹ್ನೆಯೊಂದು ಸಿಕ್ಕಿದೆ. ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ನೋಟಾ (ನನ್ ಆಫ್ ದಿ ಎಬವ್)...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ನೋಟಾ ಆಯ್ಕೆಗೂ ಈಗ ಹೊಸ ಚಿಹ್ನೆಯೊಂದು ಸಿಕ್ಕಿದೆ. ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ನೋಟಾ (ನನ್ ಆಫ್  ದಿ ಎಬವ್)ಗೆ ಚಿಹ್ನೆಯನ್ನು ನೀಡಿದೆ. ಈ ಚಿಹ್ನೆಯನ್ನು ಮತ ಪತ್ರಗಳು ಹಾಗೂ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅಭ್ಯರ್ಥಿಗಳ ಚಿಹ್ನೆಯಷ್ಟೇ ಪ್ರಧಾನವಾಗಿ ಪ್ರದರ್ಶಿಸಲಾಗುತ್ತದೆ. ಸುಪ್ರೀಂ ಕೋರ್ಟ್ 2013ರ ಅಕ್ಟೋಬರ್ 27 ರಂದು ನೀಡಿದ ಆದೇಶದಂತೆ ಎಲ್ಲ ಚುನಾವಣೆಗಳಲ್ಲೂ ಈಗ ನೋಟಾ ಐಚ್ಛಿಕವಾಗಿಡಲಾಗಿದೆ. ಚುನಾವಣಾ ಕಣದಲ್ಲಿ ಇರುವ ಯಾವೊಬ್ಬ ಅಭ್ಯರ್ಥಿಗೂ ಮತ ಹಾಕಲು ಇಚ್ಛಿಸದ ಮತದಾರರು ನೋಟಾ- ``ಮೇಲಿನ ಯಾರಿಗೂ (ಮತ) ಇಲ್ಲ'' ಎಂದು ತಮ್ಮ ಚುನಾವಣಾ ಹಕ್ಕನ್ನು ಚಲಾಯಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com