ಬದುಕಿದ್ದ ವ್ಯಕ್ತಿಯ ಮೇಲೆ ರಸ್ತೆ ನಿರ್ಮಾಣ ಮಾಡಿದ ಕಾರ್ಮಿಕರು

ಕುಡಿದ ವ್ಯಕ್ತಿಯೊಬ್ಬ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ ಅಗೆದಿದ್ದ ಗುಂಡಿಯೊಳಗೆ ಮುಗ್ಗರಿಸಿ ಬಿದ್ದಿದ್ದು, ಅದನ್ನು ಗಮನಿಸದೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮಧ್ಯಪ್ರದೇಶ: ಕುಡಿದ ವ್ಯಕ್ತಿಯೊಬ್ಬ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ ಅಗೆದಿದ್ದ ಗುಂಡಿಯೊಳಗೆ ಮುಗ್ಗರಿಸಿ ಬಿದ್ದಿದ್ದು, ಅದನ್ನು ಗಮನಿಸದೆ ಆತನ ಮೇಲೆಯೇ ಕಲ್ಲು, ಮಣ್ಣು ತುಂಬಿ ಟಾರ್ ಎಳೆದಿರುವ ದಾರುಣ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ.

 ಪತ್ನಿಯೊಂದಿಗೆ ಜಗಳವಾಡಿಕೊಂಡು ಹೊರಗೆ ಹೋಗಿದ್ದ 45 ವರ್ಷದ ಲಟೋರಿ ಲಾಲ್ ಎಂಬಾತ ಕಂಠ ಪೂರ್ತಿ ಕುಡಿದಿದ್ದ.  ಈತ ವಾಪಾಸ್ ಮನೆಗೆ ಬರುವ ವೇಳೆ ರಸ್ತೆ ಕಾಮಗಾಗಿ ನಡೆಯುತ್ತಿದ್ದ ಸ್ಥಳದಲ್ಲಿ ಅಗೆದಿದ್ದ ಗುಂಡಿಯೊಳಗೆ ಬಿದ್ದಿದ್ದಾನೆ. ರಾತ್ರಿಯಲ್ಲೂ ಕಾಮಗಾರಿ ನಿರ್ವಹಿಸುತ್ತಿದ್ದ ಕೆಲಸಗಾರರು ಇದನ್ನು ಗಮನಿಸದೆ ಗುಂಡಿಗೆ ಕಲ್ಲು, ಮಣ್ಣು ತುಂಬಿ ಮೇಲೆ ರೋಡ್ ರೋಲರ್ ನಿಂದ ಟಾರ್ ಎಳೆದಿದ್ದಾರೆ.

ಎಷ್ಟು ಹೊತ್ತಾದರೂ ಬಾರದ ಕಾರಣ ಲಟೋರಿ ಲಾಲ್ ಪತ್ನಿ ಗ್ರಾಮಸ್ಥರೊಂದಿಗೆ ಹುಡುಕಾಟ ನಡೆಸಿದ್ದಾಳೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಲಟೋರಿ ಲಾಲ್ ನ ಶರ್ಟ್ ನ ಸ್ವಲ್ಪ ಭಾಗ ಹೊರಗಿದ್ದು, ಅಗೆದು ನೋಡಿದಾಗ ಶವ ಕಂಡು ಬಂದಿದೆ. ರೋಡ್ ರೋಲರ್, ಲಟೋರಿ ಲಾಲ್ ಮೇಲೆ ಹತ್ತಿದ್ದು, ಅದನ್ನು ಮುಚ್ಚಿ ಹಾಕುವ ಸಲುವಾಗಿ ಹೂತಿಡಲಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು.  ಪರಿಹಾರ ಕೊಡಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ರೋಡ್ ರೋಲರ್ ಚಾಲಕ ಹಾಗೂ ಒಬ್ಬ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com