ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ ನೀಡಿದ ಮನೇಕಾ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ 65ನೇ ಹುಟ್ಟುಹಬ್ಬಕ್ಕೆ ಕೇಂದ್ರ ಸಚಿವೆ ಮನೇಕಾ ಗಾಂಧಿ ವಿಶೇಷ ಉಡುಗೊರೆ ನೀಡಿದ್ದಾರೆ...
ಮನೇಕಾ ಗಾಂಧಿ ಮತ್ತು ಪ್ರಧಾನಿ ಮೋದಿ
ಮನೇಕಾ ಗಾಂಧಿ ಮತ್ತು ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 65ನೇ ಹುಟ್ಟುಹಬ್ಬಕ್ಕೆ ಕೇಂದ್ರ ಸಚಿವೆ ಮನೇಕಾ ಗಾಂಧಿ ವಿಶೇಷ ಉಡುಗೊರೆ ನೀಡಿದ್ದಾರೆ.

ಆಂಗ್ಲ ಪತ್ರಿಕೆಯೊಂದರ ವರದಿ ಪ್ರಕಾರ ಮೋದಿ ಹುಟ್ಟುಹಬ್ಬದಂದು ಅಂದರೆ ಸೆಪ್ಟಂಬರ್ 17 ರಂದು ಮನೇಕಾ ಗಾಂಧಿ ಅಪರೂಪದ ಹಾಗೂ ಪವಿತ್ರವಾದ ಉಡುಗೊರೆ ನೀಡಿದ್ದಾರೆ. ಈ ವಿಶೇಷ ಗಿಫ್ಟ್ ಗಾಗಿ ಹಲವು ದಿನಗಳ ಕಾಲ ಹುಡುಕಾಟ ನಡೆಸಿ, ಕೊನೆಗೆ ಡೆಹ್ರಾಡೂನ್ ನಲ್ಲಿ ಈ ವಿಶೇಷ ಗಿಫ್ಟ್ ಪತ್ತೆ ಹಚ್ಚಿದ್ದಾರೆ. ನಂತರ ಅದನ್ನು ಅಲ್ಲಿಂದ ದೆಹಲಿಗೆ ತರಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ಕೃಷ್ಣ ಬೆಣ್ಣೆ ತಿನ್ನುತ್ತಿದ್ದ ಕಪ್ ರೀತಿಯ ಮರದ ಕಪ್ ಅನ್ನು ಮನೇಕಾ ನೀಡಿದ್ದಾರೆ. ಮರದ ಕಪ್ ಅನ್ನು ಎಲೆಗಳ ಆಕಾರದಲ್ಲಿ ತಯಾರಿಸಲಾಗಿದೆ. ಇನ್ನು ಶ್ರೀಕೃಷ್ಣ ಬೆಣ್ಣೆ ಕದ್ದು ಯಶೋದೆಯಿಂದ ತಪ್ಪಿಸಿಕೊಳ್ಳಲು ಮರದ ಎಲೆಗಳನ್ನು  ಸುತ್ತಿ ಬಟ್ಟಲಿನ ರೀತಿ ಮಾಡಿಕೊಂಡು ಅದರಲ್ಲಿ ಬೆಣ್ಣೆ ಇಟ್ಟು ಕೊಳ್ಳುತ್ತಿದ್ದ. ಇದನ್ನು ಮಕಾನ್ ಕಟೋರಿ ಎಂದು ಕರೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com