ಪ್ರಧಾನಿಗೆ ಗ್ರೀನ್ ಪೀಸ್ ದೂರು

ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಹಾಳು ಮಾಡುತ್ತಿರುವುದು ಕೇಂದ್ರ ಗೃಹ ಸಚಿವಾಲಯ! ಹೀಗಂತ ಗ್ರೀನ್ ಪೀಸ್ ಎನ್‍ಜಿಓ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದೆ...
ಗ್ರೀನ್ ಪೀಸ್ ಇಂಡಿಯಾ (ಸಂಗ್ರಹ ಚಿತ್ರ)
ಗ್ರೀನ್ ಪೀಸ್ ಇಂಡಿಯಾ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಹಾಳು ಮಾಡುತ್ತಿರುವುದು ಕೇಂದ್ರ ಗೃಹ ಸಚಿವಾಲಯ! ಹೀಗಂತ ಗ್ರೀನ್ ಪೀಸ್ ಎನ್‍ಜಿಓ ಸಂಘಟನೆ ಪ್ರಧಾನಿ ನರೇಂದ್ರ ಮೋದಿ  ಅವರಿಗೆ ದೂರು ನೀಡಿದೆ.

ಗೃಹ ಸಚಿವಾಲಯವು ಗ್ರೀನ್ ಪೀಸ್ ಎನ್‍ಜಿಓ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು, ಇದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದೆ. ತಮ್ಮ ಎನ್‍ಜಿಓ ವಿರುದ್ಧ ನಡೆಸುತ್ತಿರುವ ಅಪಪ್ರಚಾರದಿಂದ  ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿಯಾಗುತ್ತಿದೆ ಎಂದು ಹೇಳಿದೆ. ಭಾರತ ಮತ್ತು ಅಮೆರಿಕದಲ್ಲಿರುವ ಗ್ರೀನ್ ಪೀಸ್‍ನ ನಿರ್ದೇಶಕರು ಮೋದಿಗೆ ಈ  ಸಂಬಂಧ ಬಹಿರಂಗ ಪತ್ರ ಬರೆದಿದ್ದಾರೆ. ಗ್ರೀನ್ ಪೀಸ್ ವಿರುದ್ಧದ ಕೇಂದ್ರದ ಕ್ರಮಗಳು ಪ್ರಶ್ನಾರ್ಥಕವಾಗಿವೆ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com