

ನವದೆಹಲಿ: ಕೇಂದ್ರೀಯ ನಾಗರಿಕ ಸೇವಾ ಪರೀಕ್ಷೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿದೆ.
ಪಠ್ಯಕ್ರಮ, ವಯೋಮಿತಿ ಸಡಿಲಿಕೆ, ಅರ್ಹತೆಗೆ ಸಂಬಂಧಿಸಿದ ಮಾಹಿತಿಯ ಅಧ್ಯಯನ ನಡೆಸಲಿದೆ. ಕೇಂದ್ರ ಸಿಬ್ಬಂದಿ ಖಾತೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್ ಈ ಮಾಹಿತಿ ನೀಡಿದ್ದಾರೆ. ಈ ಸಮಿತಿ ನೀಡಿದ ವರದಿಯ ಆಧಾರದ ಹಿನ್ನೆಲೆಯಲ್ಲಿ ಪರೀಕ್ಷಾ ಕ್ರಮದಲ್ಲಿ ಬದಲು ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ವೈದ್ಯಕೀಯ, ಎಂಜಿನಿಯರಿಂಗ್, ಮಾನವಿಕ ವಿಭಾಗಗಳಿಂದ ಬರುವವರಿಗೆ ಅನುಕೂಲವಾಗಲಿದೆ. ವರದಿ ಸಲ್ಲಿಸುವವರೆಗೆ ಜನರಲ್ ಸ್ಟಡೀಸ್ ವಿಷಯದಲ್ಲಿ ಉತ್ತೀರ್ಣರಾಗಬೇಕು. ಪ್ರವೇಶ ಪರೀಕ್ಷೆಯಲ್ಲಿ ಶೇ.33 ಅಂಕ ಪಡೆಯಬೇಕೆಂಬ ನಿಯಮ ಜಾರಿಯಲ್ಲಿರುತ್ತದೆ.