ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಜಯಂತಿ

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಸೇನಾನಿ ಶಹೀದ್ ಭಗತ್ ಸಿಂಗ್ ಅವರ 108ನೇ...
ಭಗತ್ ಸಿಂಗ್
ಭಗತ್ ಸಿಂಗ್
Updated on: 

ನವದೆಹಲಿ: ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಸೇನಾನಿ ಶಹೀದ್ ಭಗತ್ ಸಿಂಗ್  ಅವರ 108ನೇ ಜಯಂತಿ ಅಂಗವಾಗಿ ರಾಷ್ಟ್ರ ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ.

ಇಂದು ಅವರ ಜಯಂತಿ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಅವರ ಹುಟ್ಟೂರಾದ ಪಂಜಾಬ್ ನ ಭಗತ್ ಸಿಂಗ್ ನಗರ್ ಜಿಲ್ಲೆಯ ಖತ್ಕರ್ ಕಲಾನ್ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಫೆರೋಜ್ ಪುರದ ಹುಸ್ಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮ ಸ್ಮಾರಕಕ್ಕೆ ಜನರು ಬೆಳಗ್ಗೆಯಿಂದಲೇ ಭೇಟಿ ನೀಡುತ್ತಿದ್ದಾರೆ.

ಹುತಾತ್ಮರ ಗೌರವಾರ್ಥ ಭಗತ್ ಸಿಂಗ್ ಅವರ ಹುಟ್ಟೂರು ಗ್ರಾಮವಾದ ಕಟ್ಕರ್ ಕಲಾನ್ ನ್ನು ಸಂಸದರ ಆದರ್ಶ ಗ್ರಾಮದಡಿ ಸೇರಿಸಲಾಗಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌದರಿ ಬೀರೇಂದರ್ ಸಿಂಗ್ ಗ್ರಾಮಕ್ಕೆ ತೆರಳಿ ಭಗತ್ ಸಿಂಗ್ ಅವರ ಮೂರ್ತಿಗೆ ಗೌರವ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಚಿವರು ಮತ್ತು ಇತರ ನಾಯಕರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com