ನಿತ್ಯಾನಂದ - ತರುಣ್  ತೇಜ್‍ಪಾಲ್‍
ನಿತ್ಯಾನಂದ - ತರುಣ್ ತೇಜ್‍ಪಾಲ್‍

ಪುರುಷತ್ವ ಪರೀಕ್ಷೆಗೆ ಒಳಗಾದ ಪ್ರಮುಖರು

ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯನ್ನು ಬೆಂಗಳೂರಿನ...

ಸೆಪ್ಟೆಂಬರ್ 2014: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಮಾರ್ಚ್ 2013:
ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತೆಹೆಲ್ಕಾ ನಿಯತಕಾಲಿಕೆಯ ಪ್ರಧಾನ ಸಂಪಾದಕ ತರುಣ್  ತೇಜ್‍ಪಾಲ್‍ರನ್ನು (50) ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಐದು ತಾಸು ಪರೀಕ್ಷೆ ನಡೆಸಿದ್ದ ಗೋವಾದ ವೈದ್ಯರ ತಂಡ, ತೇಜ್‍ಪಾಲ್ ಲೈಂಗಿಕ ಕ್ರಿಯೆ ನಡೆಸಲು ಸಮರ್ಥ ಎಂದು ವರದಿ ನೀಡಿತ್ತು.

ಮುಂಬೈನಲ್ಲಿ 25 ಮಕ್ಕಳ ಮೇಲೆ ಸರಣಿ ಅತ್ಯಾಚಾರ ನಡೆಸಿದ್ದ ಆರೋಪದ ಮೇಲೆ ಅಯಾದ್ ಮೊಹಮ್ಮದ್ ಅಲಿ ಅನ್ಸಾರಿ ಎಂಬಾತನಿಗೆ ಮುಂಬೈನಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಂಸದ ಧನಂಜಯ್ ಸಿಂಗ್‍ಗೆ ಪುರುಷತ್ವ ಪರೀಕ್ಷೆ ನಡೆಸುವಂತೆ ದೆಹಲಿ ನ್ಯಾಯಾಲಯ ನಿರ್ದೇಶನ ನೀಡಿತ್ತು.

51 ವರ್ಷದ ಡ್ಯಾನಿಷ್ ಮಹಿಳೆ ಮೇಲೆ ದೆಹಲಿಯಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರೋಪಿ ಶ್ಯಾಮಲಾಲ್ ಎಂಬಾತನ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com