ಜಾರ್ಖಂಡ್ ನಲ್ಲಿ ನೆಲಬಾಂಬ್ ಸ್ಫೋಟ: ಐವರು ಪೊಲೀಸರಿಗೆ ಗಾಯ

ಜಾರ್ಖಂಡ್ ನಲ್ಲಿ ನೆಲಬಾಂಬ್ ಸ್ಫೋಟ ಸಂಭವಿಸಿದ್ದು ಐವರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.
ಜಾರ್ಖಂಡ್ ನಲ್ಲಿ ನೆಲಬಾಂಬ್ ಸ್ಫೋಟ: ಐವರು ಪೊಲೀಸರಿಗೆ ಗಾಯ
ಜಾರ್ಖಂಡ್ ನಲ್ಲಿ ನೆಲಬಾಂಬ್ ಸ್ಫೋಟ: ಐವರು ಪೊಲೀಸರಿಗೆ ಗಾಯ

ರಾಂಚಿ: ಜಾರ್ಖಂಡ್ ನಲ್ಲಿ ನೆಲಬಾಂಬ್ ಸ್ಫೋಟ ಸಂಭವಿಸಿದ್ದು ಐವರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.

ಧನ್ಬಾದ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ವೇಳೆ ಮಾವೋವಾದಿಗಳು ಇರಿಸಿದ್ದ ನೆಲಬಾಂಬ್ ಸ್ಫೋಟಗೊಂಡಿದ್ದು 5 ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಜಾರ್ಖಂಡ್ ನ ಪೊಲೀಸ್ ಇಲಾಖೆ ವಕ್ತಾರ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.   
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಾರ್ಖಂಡ್ ನ 24 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಾವೋವಾದಿಗಳು ಸಕ್ರಿಯರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com