ಶ್ರೀನಗರ: ಇಡೀ ರಾತ್ರಿಯಲ್ಲಾ ತಮ್ಮ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು, ಚೆನ್ನಾಗಿ ಕೆಲಸ ಮಾಡಿ, ಇಲ್ಲದಿದ್ದರೆ ಜನ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ತಮ್ಮ ನೂತನ ಸಚಿವರಿಗೆ ಎಚ್ಚರಿಸಿದ್ದಾರೆ.
ಕಣಿವೆ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ನಂತರ ತಡರಾತ್ರಿ ಮೊದಲ ಸಂಪುಟ ಸಭೆ ನಡೆಸಿದ ಮುಫ್ತಿ, ಉತ್ತಮ ಕೆಲಸ ಮಾಡಿ. ಇಲ್ಲದಿದ್ದರೆ ಜನ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.
ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ (ಬಿಜೆಪಿ) ಅವರಿಗೆ ಇಂಧನ ಅಭಿವೃದ್ಧಿ, ವಸತಿ ಹಾಗೂ ನಗರಾಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.
ನೂತನ ಸಚಿವ ಅಬ್ದುಲ್ ರೆಹಮಾನ್ ಭಟ್ ವೀರಿ(ಪಿಡಿಪಿ) ಅವರಿಗೆ ಸಂಸದೀಯ ವ್ಯವಹಾರ ಹಾಗೂ ರಸ್ತೆ ಮತ್ತು ಕಟ್ಟಡ ಖಾತೆ ನೀಡಲಾಗಿದೆ.
ಹಸೀಬ್ ದ್ರಾಬು(ಪಿಡಿಪಿ) ಅವರು ಹಣಕಾಸು, ಯೋಜನೆ ಮತ್ತು ಸಂಸ್ಕೃತಿ ಖಾತೆಗಳನ್ನು ಪಡೆದಿದ್ದಾರೆ.
ನಯೀಮ್ ಅಖ್ತರ್(ಪಿಡಿಪಿ) ಶಿಕ್ಷಣ ಖಾತೆ ನೀಡಿದರೆ, ಸಯೀದ್ ಬಷರತ್ ಬುಖಾರಿ(ಪಿಡಿಪಿ) ಕಂದಾಯ ಖಾತೆ ಹಾಗೂ ಅಬ್ದುಲ್ ಹಖ್(ಪಿಡಿಪಿ)ಗೆ ಗ್ರಾಮೀಣಾಭಿವೃದ್ಧಿ, ಪಂಜಾಯತ್ ರಾಜ್ ಹಾಗೂ ಕಾನೂನು ಖಾತೆಯನ್ನು ನೀಡಲಾಗಿದೆ.